ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ಕಂಡು ಬಂದಿದ್ದು ಇಂದು ರಿಲಯನ್ಸ್ ಇಂಡಸ್ಟ್ರೀಸ್ ತನ್ನ ನಾಲ್ಕನೇ ತ್ತೈಮಾಸಿಕ ಹಾಗೂ ವಾರ್ಷಿಕ ಆದಾಯ ಫಲಿತಾಂಶವನ್ನು ಪ್ರಕಟಿಸುವುದಕ್ಕೆ ಮುನ್ನವೇ ಹೂಡಿಕೆದಾರರು ಹಾಗೂ ವಹಿವಾಟುದಾರರು ಶೇರು ಖರೀದಿಯಲ್ಲಿ ಆಸಕ್ತಿ ತೋರಿದ ಪರಿಣಮವಾಗಿ ಮುಂಬಯಿ ಶೇರು ಪೇಟೆ ಇಂದುಸೋಮವಾರದ ಆರಂಭಿಕ ವಹಿವಾಟಿನಲ್ಲಿ 97 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 135.18 ಅಂಕಗಳ ಏರಿಕೆಯೊಂದಿಗೆ 29,500.48 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 42.75 ಅಂಕಗಳ ಏರಿಕೆಯೊಂದಿಗೆ 9,162.15 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಆರಂಭಿಕ ವಹಿವಾಟಿನಲ್ಲಿ ಎಸಿಸಿ, ಗ್ರಾಸಿಂ, ಅಲ್ಟ್ರಾ ಟೆಕ್ ಸಿಮೆಂಟ್, ಎಚ್ ಡಿ ಎಫ್ ಸಿ ಬ್ಯಾಂಕ್, ಅಂಬುಜಾ ಸಿಮೆಂಟ್ಸ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡಿವೆ.
ಇದೇ ವೇಳೆ ಲೂಪಿನ್ , ಸಿಪ್ಲಾ, ಬಿಪಿಸಿಎಲ್, ಐಸಿಐಸಿಐ ಬ್ಯಾಂಕ್ ಮತ್ತು ಇನ್‌ಫೋಸಿಸ್ ಟಾಪ್ ಲೂಸರ್ ಎನಿಸಿಕೊಂಡಿವೆ.
ಏಶ್ಯನ್ ಶೇರುಮಾರುಕಟ್ಟೆಗಳ ಪೈಕಿ ಜಪಾನಿನ ನಿಕ್ಕೀ ಶೇ.1.34, ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.60 ಏರಿಕೆಯನ್ನು ದಾಖಲಿಸಿವೆಯಾದರೆ ಶಾಂಘೈ ಕಾಂಪೋಸಿಟ್ ಸೂಚ್ಯಂಕ್ ಶೇ.1.51ರ ನಷ್ಟಕ್ಕೆ ಗುರಿಯಾಗಿದೆ.