Advertisement

RBI ದರ ನೀತಿ ಸಭೆಗೆ ಮುನ್ನ ಎಚ್ಚರದ ನಡೆ: ಸೆನ್ಸೆಕ್ಸ 40 ಅಂಕ ಏರಿಕೆ

05:36 AM Feb 05, 2019 | udayavani editorial |

ಮುಂಬಯಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಹಣಕಾಸು ನೀತಿಯನ್ನು ಪ್ರಕಟಿಸುವುದಕ್ಕೆ ಮುನ್ನವೇ ಎಚ್ಚರಿಕೆಯ ನಡೆ ತೋರುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 42.81 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಏರ್‌ಟೆಲ್‌ ಶೇರು ಶೇ.4ರಷ್ಟು ಕುಸಿದು ಬಿತ್ತು. 

Advertisement

ಬೆಳಗ್ಗೆ 11 ಗಂಟೆಯ ಸುಮಾರಿಗೆ ಸ್ವಲ್ಪ ಮಟ್ಟಿನ ಚೇತರಿಕೆ ಕಂಡ ಸೆನ್ಸೆಕ್ಸ್‌ 40.42 ಅಂಕಗಳ ಏರಿಕೆಯೊಂದಿಗೆ 36,623.16 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 11.90 ಅಂಕಗಳ ಏರಿಕೆಯೊಂದಿಗೆ 10,924.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ರಿಲಯನ್ಸ್‌, ಎಸ್‌ ಬ್ಯಾಂಕ್‌, ಟೈಟಾನ್‌ ಕಂಪೆನಿ, ಡಾ. ರೆಡ್ಡೀಸ್‌ ಲ್ಯಾಬ್‌, ಭಾರ್ತಿ ಏರ್‌ಟೆಲ್‌ ಶೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 13 ಪೈಸೆಗಳ ಏರಿಕೆಯನ್ನು ಕಂಡು 71.67 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next