ಮುಂಬಯಿ : ಕಳೆದ ನಾಲ್ಕು ದಿನಗಳಿಂದ ಸೋಲಿನ ಹಾದಿ ಹಿಡಿದುಕೊಂಡಿದ್ದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 126 ಅಂಕಗಳ ಜಿಗಿತವನ್ನು ಸಾಧಿಸಿತು. ಕಳೆದ ನಾಲ್ಕು ದಿನಗಳ ಸೋಲಿನಲ್ಲಿ ಸೆನ್ಸೆಕ್ಸ್ ಒಟ್ಟು 708.41 ಅಂಕಗಳ ನಷ್ಟವನ್ನು ಅನುಭವಿಸಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಪಿಎಸ್‌ಯು, ಬ್ಯಾಂಕಿಂಗ್, ಮೆಟಲ್, ಐಟಿ, ಕ್ಯಾಪಿಟಲ್ ಗೂಡ್ಸ್ ಮತ್ತು ಟೆಕ್ ಸೂಚ್ಯಂಕಗಳು ಶೇ.0.43 ಏರಿದವು.
ಹಾಗಿದ್ದರೂ ಬೆಳಗ್ಗೆ 11.10ರ ಹೊತ್ತಿಗೆ ಸೆನ್ಸೆಕ್ಸ್ 94.26 ಅಂಕಗಳ ನಷ್ಟಕ್ಕೆ ಗುರಿಯಾಗಿ 34,754.04 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 41.10 ಅಂಕಗಳ ನಷ್ಟದೊಂದಿಗೆ 10,553.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಮಾರುತಿ ಸುಜುಕಿ, ರಿಲಯನ್ಸ್, ಟಿಸಿಎಸ್, ಐಸಿಐಸಿ ಬ್ಯಾಂಕ್, ಬಜಾಜ್ ಫಿನಾನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟಿಸಿಎಸ್, ಭಾರ್ತಿ ಇನ್‌ಫ್ರಾಟೆಲ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಕೋಲ್ ಇಂಡಿಯಾ;
ಟಾಪ್ ಲೂಸರ್‌ಗಳು ಯುಪಿಎಲ್, ಹಿಂಡಾಲ್ಕೊ, ಝೀ ಎಂಟರ್‌ಟೇನ್‌ಮೆಂಟ್, ಬಜಾಜ್ ಫಿನಾನ್ಸ್, ವೇದಾಂತ.
ಡಾಲರ್ ಎದುರು ರೂಪಾಯಿ ಇಂದು 12 ಪೈಸೆಗಳ ನಷ್ಟಕ್ಕೆ ಗುರಿಯಾಗಿ 16 ತಿಂಗಳ ಕನಿಷ್ಠ ಮಟ್ಟವಾಗಿ 68.12 ರೂ. ಮಟ್ಟಕ್ಕೆ ಇಳಿಯಿತು.