ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ತೋರಿ ಬಂದ ದೃಢತೆಯನ್ನು ಅನುಸರಿಸಿದ ಆಶಾದಾಯಕ ಕಾರ್ಪೊರೇಟ್ ತ್ತೈಮಾಸಿಕ ಫಲಿತಾಂಶಗಳ ಬಲದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರ 35,000 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,700ರ ಗಡಿಯನ್ನು ದಾಟಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 468.43 ಅಂಕಗಳ ಗಳಿಕೆ ದಾಖಲಿಸಿತ್ತು.
ಇಂದು ಬೆಳಗ್ಗೆ 11.10ರ ಹೊತ್ತಿಗೆ ಸೆನ್ಸೆಕ್ಸ್ 198.32 ಅಂಕಗಳ ಏರಿಕೆಯೊಂದಿಗೆ 35,168.02 ಅಂಕಗಳ ಮಟ್ಟದಲ್ಲೂ ನಿಫ್ಟಿ 54.90 ಅಂಕಗಳ ಏರಿಕೆಯೊಂದಿಗೆ 10,747.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಎಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್, ಎಸ್‌ಬಿಐ ಮತ್ತು ಟಿಸಿಎಸ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ವೇದಾಂತ, ಎಸ್‌ಬಿಐ, ಎಸ್ ಬ್ಯಾಂಕ್, ಟಿಸಿಎಸ್, ಎಚ್‌ಸಿಎಲ್ ಟೆಕ್ ಶೇರುಗಳು ಮೂಡಿ ಬಂದವು; ಟಾಪ್ ಲೂಸರ್‌ಗಳಾಗಿ ಎಕ್ಸಿಸ್ ಬ್ಯಾಂಕ್,… ಯುಪಿಎಲ್, ರಿಲಯನ್ಸ್, ಭಾರ್ತಿ ಇನ್‌ಫ್ರಾಟೆಲ್, ಬಿಪಿಸಿಎಲ್ ಶೇರಗಳು ಹಿನ್ನಡೆಗೆ ಗುರಿಯಾದವು.