ಮುಂಬಯಿ : ಸಿರಿಯ ಮೇಲೆ ಪ್ರಹಾರ ಗೈದಿರುವ ಅಮೆರಿಕದ ವಿರುದ್ದ ತಾನು ಕ್ರಮಕೈಗೊಳ್ಳುವುದಾಗಿ ರಶ್ಯ ಹಾಕಿರುವ ಬೆದರಿಕೆಯಿಂದ ಸಮರ ಸ್ಫೋಟದ ಭೀತಿ ಉಂಟಾಗಿರುವ ಮತ್ತು ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ದೌರ್ಬಲ್ಯ ತೋರಿ ಬಂದ ಕಾರಣ ಮುಂಬಯಿ ಶೇರು ಮಾರುಕಟ್ಟೆ ಇಂದು ಸೋಮವಾರದ ವಹಿವಾಟಿನಲ್ಲಿ 300 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.
ಕಳೆದ ಏಳು ದಿನಗಳ ಕಾಲ ನಿರಂತರ ಏರುಗತಿಯನ್ನು ಕಾಯ್ದುಕೊಂಡಿದ್ದ ಮುಂಬಯಿ ಶೇರು ಒಟ್ಟು 1,173.88 ಅಂಕಗಳನ್ನು ಸಂಪಾದಿಸತ್ತು.
ಇಂದು ಬೆಳಗ್ಗೆ 11.30ರ ಸುಮಾರಿಗೆ ಸೆನ್ಸೆಕ್ಸ್ 107.25 ಅಂಕಗಳ ನಷ್ಟದೊಂದಿಗೆ 34,085.40 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 27.50 ಅಂಕಗಳ ನಷ್ಟದೊಂದಿಗೆ 10,453.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಇನ್‌ಫೋಸಿಸ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಟಾಟಾ ಮೋಟರ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಪ್ರಮುಖ ಲೂಸರ್‌ಗಳಾಗಿ ಟಾಟಾ ಮೋಟರ್, ವಿಪ್ರೋ, ಎಕ್ಸಿಸ್ ಬ್ಯಾಂಕ್, ಒಎನ್‌ಜಿಸಿ, ಎನ್‌ಟಿಪಿಸಿ, ಆರ್‌ಐಎಲ್. ಡಾ. ರೆಡ್ಡಿ, ಎಸ್‌ಬಿಐ, ಭಾರ್ತಿ ಏರ್‌ಟೆಲ್,ಐಸಿಐಸಿಐ ಬ್ಯಾಂಕ್, ಮಾರುತಿ ಸುಜುಕಿ, ಏಶ್ಯನ್ ಪೇಂಟ್ ಶೇರುಗಳು ಕಂಡುಬಂದವು.