ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 238.86 ಅಂಕಗಳ ನಷ್ಟದೊಂದಿಗೆ 32,237.88 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 67.85 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,013.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ನಿಫ್ಟಿ ತನ್ನ ಐತಿಹಾಸಿಕ 10,000 ಮಟ್ಟವನ್ನು ಉಳಿಸಿಕೊಂಡದ್ದೇ ಸಮಾಧಾನದ ವಿಷಯವೆನಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳಲ್ಲಿ ಮುನ್ನಡೆ ಕಂಡ ಪ್ರತಿಯೊಂದು ಶೇರಿಗೆ ಪ್ರತಿಯಾಗಿ ಎರಡು ಶೇರುಗಳು ಹಿನ್ನಡೆಗೆ ಗುರಿಯಾಗುವ ಮೂಲಕ ವಹಿವಾಟಿನ ಹರಹು ನಿರಾಶಾದಾಯಕವೆನಿಸಿತು.
ಇಂದು ವಿಶೇಷವಾಗಿ ವಿಜೃಂಭಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಶೇರು ಶೇ.1.6ರ ಜಿಗಿತವನ್ನು ಕಂಡು 1,655 ರೂ.ಗಳ ದಾಖಲೆಯ ದಿನಾಂತ್ಯದ ಎತ್ತರದಲ್ಲಿ ಸ್ಥಿತವಾಯಿತು.
ಇಂದಿನ ನಿಫ್ಟಿ ಟಾಪ್ ಗೇನರ್‌ಗಳು : ಎಸಿಸಿ, ಅಂಬುಜಾ ಸಿಮೆಂಟ್ಸ್, ಭಾರ್ತಿ ಏರ್‌ಟೆಲ್, ಅರಬಿಂದೋ ಫಾರ್ಮಾ;
ಟಾಪ್ ಲೂಸರ್‌ಗಳು : ಲೂಪಿನ್, ಕೋಲ್ ಇಂಡಿಯಾ, ಹಿಂಡಾಲ್ಕೊ, ಬ್ಯಾಂಕ್ ಆಫ್ ಬರೋಡ, ಟಾಟಾ ಮೋಟರ್(ಡಿ).