Advertisement

ಮೊದಲ ಬಾರಿಗೆ 35,000 ದಾಟಿದ ಮುಂಬಯಿ ಶೇರು ವಿಕ್ರಮ

04:41 PM Jan 17, 2018 | |

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ 310.77 ಅಂಕಗಳ ಭರ್ಜರಿ ಏರಿಕೆಯನ್ನು ಸಾಧಿಸಿ ಇದೇ ಮೊದಲ ಬಾರಿಗೆ 35,081.82 ಅಂಕಗಳ ಮಟ್ಟವನ್ನು ದಾಟುವ ಮೂಲಕ ಇಂದು ಬುಧವಾರದ ವಹಿವಾಟನ್ನು ತುಂಬು ಹುಮ್ಮಸ್ಸಿನೊಂದಿಗೆ ಕೊನೆಗೊಳಿಸಿತು. ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಶೇರುಗಳ ಭರಾಟೆಯ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಸೆನ್ಸೆಕ್ಸ್‌, ನಿಫ್ಟಿ ಹೊಸ ಸಾರ್ವಕಾಲಿಕ ಎತ್ತರವನ್ನು ಕಂಡವು. 

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 88.10 ಅಂಕಗಳ ಏರಿಕೆಯನ್ನು ದಾಖಲಿಸಿ 10,788.55 ಅಂಕಗಳ ಸಾರ್ವಕಾಲಿಕ ಎತ್ತರದ ಮಟ್ಟವನ್ನು ತಲುಪಿತು.  

ಕಳೆದ ಡಿ.26ರಂದು ಸೆನ್ಸೆಕ್ಸ್‌ 34,000 ಅಂಕಗಳ ಮಟ್ಟ ದಾಟಿದ ಬಳಿಕ ಸರಿಯಾಗಿ 17 ದಿನಗಳ ವಹಿವಾಟಿನಲ್ಲಿ 35,000 ಅಂಕಗಳ ಹೊಸ ದಾಖಲೆಯ ಎತ್ತರವನ್ನು ತಲುಪಿದೆ. 

ಇಂದು 3,044 ಶೇರುಗಳು ವಹಿವಾಟಿಗೆ ಒಳಪಟ್ಟವು; 1,456 ಶೇರುಗಳು ಮುನ್ನಡೆ ಸಾಧಿಸಿದವು; 1,437 ಶೇರುಗಳ ಹಿನ್ನಡೆಗೆ ಗುರಿಯಾದವು; 151 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next