Advertisement

ಬ್ಲೂ ಚಿಪ್‌ ಖರೀದಿ ಆಸಕ್ತಿ : ಮುಂಬಯಿ ಶೇರು 174 ಅಂಕ ಜಿಗಿತ

10:37 AM Jul 19, 2017 | |

ಮುಂಬಯಿ : ಹಿಂದುಸ್ಥಾನ್‌ ಲಿವರ್‌ ಕಂಪೆನಿ ನಿರೀಕ್ಷೆಗಿಂತ ಉತ್ತಮವಾಗಿ ತ್ತೈಮಾಸಿಕ ಫ‌ಲಿತಾಂಶ ಪ್ರಕಟಿಸಿದ್ದು  ಹೂಡಿಕೆದಾರರು ಹಾಗೂ ವಹಿವಾಟುದಾರರು ಹೊಸ ಖರೀದಿಗೆ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 174 ಅಂಕಗಳ ಉತ್ತಮ ಮುನ್ನಡೆಯನ್ನು ಕಂಡಿತು.

Advertisement

ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್‌ 140.44 ಅಂಕಗಳ ಮುನ್ನಡೆಯೊಂದಿಗೆ 31,851.43 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.90 ಅಂಕಗಳ ಮುನ್ನಡೆಯೊ,ದಿಗೆ 9,864.05 ಅಂಗಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಆರಂಭಿಕ ವಹಿವಾಟಿನಲ್ಲಿ ಅರಬಿಂದೋ ಫಾರ್ಮಾ, ಐಟಿಸಿ, ಎಚ್‌ಯುಎಲ್‌, ಹಿಂಡಾಲ್ಕೊ, ರಿಲಯನ್ಸ್‌ ಶೇರುಗಳು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದವು. 

ಟಾಪ್‌ ಗೇನರ್‌ಗಳು : ಅರಬಿಂದೋ ಫಾರ್ಮಾ, ಹಿಂಡಾಲ್ಕೊ, ಝೀ ಎಂಟರ್‌ಟೇನ್‌ಮೆಂಟ್‌, ಐಡಿಯಾ ಸೆಲ್ಯುಲರ್‌, ಎಚ್‌ಸಿಎಲ್‌ ಟೆಕ್‌; ಟಾಪ್‌ ಲೂಸರ್‌ಗಳು : ಅಲ್‌ಟ್ರಾ ಟೆಕ್‌ ಸಿಮೆಂಟ್‌, ಎಸಿಸಿ, ಇನ್‌ಫೋಸಿಸ್‌, ಬಜಾಜ್‌ ಆಟೋ, ಒಎನ್‌ಜಿಸಿ.

Advertisement

Udayavani is now on Telegram. Click here to join our channel and stay updated with the latest news.

Next