Advertisement

ವಾರಾಂತ್ಯ ದಿನ ಎಚ್ಚರಿಕೆಯ ನಡೆ: ಮುಂಬಯಿ ಶೇರು 46 ಅಂಕ ನಷ್ಟ

10:55 AM Jul 07, 2017 | |

ಮುಂಬಯಿ : ವಾರಾಂತ್ಯ ದಿನದ ಆರಂಭಿಕ ವಹಿವಾಟಿನಲ್ಲಿ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರ ಬೆಳಗ್ಗೆ 10.50ರ ಹೊತ್ತಿಗೆ 46.61 ಅಂಕಗಳ ನಷ್ಟಕ್ಕೆ ಗುರಿಯಾಗಿ 31,324.73 ಅಂಕಗಳ ಮಟ್ಟದಲ್ಲಿ  ವ್ಯವಹಾರ ನಿರತವಾಗಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 18.35 ಅಂಕಗಳ ನಷ್ಟಕ್ಕೆ ಗುರಿಯಾಗಿ 9,656.20 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದೆ. 

ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ  ಕೇವಲ 20 ಶೇರುಗಳು ಮುನ್ನಡೆ ಕಂಡರೆ 31 ಶೇರಗಳು ಹಿನ್ನಡೆಗೆ ಗುರಿಯಾಗಿವೆ. 

ರಿಲಯನ್ಸ್‌, ಲೂಪಿನ್‌, ಎಚ್‌ ಡಿ ಎಫ್ ಸಿ, ಅರಬಿಂದೋ ಫಾರ್ಮಾ, ಎಸ್‌ ಬ್ಯಾಂಕ್‌ ಶೇರಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಟಾಪ್‌ ಗೇನರ್‌ಗಳು : ಲೂಪಿನ್‌ ಡಾ. ರೆಡ್ಡಿ, ಅರಬಿಂದೋ ಫಾರ್ಮಾ, ಝೀ ಎಂಟರ್‌ಟೇನ್‌ಮೆಂಟ್‌, ಸಿಪ್ಲಾ; ಟಾಪ್‌ ಲೂಸರ್‌ಗಳು: ಭಾರ್ತಿ ಇನ್‌ಫ್ರಾಟೆಲ್‌. ಎಚ್‌ ಡಿ ಎಫ್ ಸಿ, ಏಶ್ಯನ್‌ ಪೇಂಟ್ಸ್‌ ಅಂಬುಜಾ ಸಿಮೆಂಟ್ಸ್‌, ಗೇಲ್‌. 

Advertisement
Advertisement

Udayavani is now on Telegram. Click here to join our channel and stay updated with the latest news.

Next