ಮುಂಬಯಿ : ನಿನ್ನೆ ಮಂಗಳವಾರದ ವಹಿವಾಟಿನಲ್ಲಿ 360 ಅಂಕಗಳ ನಷ್ಟಕ್ಕೆ ಗುರಿಯಾಗಿ ಹೂಡಿಕೆದಾರರು ಮತ್ತು ವಹಿವಾಟುದಾರರಲ್ಲಿ ತಲ್ಲಣ, ಆತಂಕ ಮೂಡಿಸಿದ್ದ ಮುಂಬಯಿ ಶೇರು ಪೇಟೆ ಇಂದು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಪುಟಿದೆದ್ದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 53 ಅಂಕಗಳ ಜಿಗಿತವನ್ನು ಸಾಧಿಸಿದೆ.
ಬೆಳಗ್ಗೆ 11.45ರ ಹೊತ್ತಿಗೆ ಸೆನ್ಸೆಕ್ಸ್ 60.91 ಅಂಕಗಳ ಮುನ್ನಡೆಯೊಂದಿಗೆ 33,431.67 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11.10 ಅಂಕಗಳ ಮುನ್ನಡೆಯೊಂದಿಗೆ 10,361.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್, ಲೂಪಿನ್, ಎಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಸಿಪ್ಲಾ, ಸನ್ ಫಾರ್ಮಾ, ಟೆಕ್ ಮಹೀಂದ್ರ, ಭಾರ್ತಿ ಇನ್‌ಫ್ರಾಟೆಲ್, ಏಶ್ಯನ್ ಪೇಂಟ್ಸ್.
Related Articles
ಟಾಪ್ ಲೂಸರ್‌ಗಳು : ಭಾರ್ತಿ ಏರ್‌ಟೆಲ್, ಎಚ್‌ಪಿಸಿಎಲ್, ಎಸ್ ಬ್ಯಾಂಕ್, ರಿಲಯನ್ಸ್, ವೇದಾಂತ.