ಮುಂಬಯಿ : ನಿರಂತರ ನಾಲ್ಕನೇ ದಿನವಾಗಿ ಇಂದು ಗುರುವಾರವೂ ತನ್ನ ಏರು ಗತಿಯನ್ನು ಕಾಯ್ದುಕೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 128 ಅಂಕಗಳ ಜಿಗಿತವನ್ನು ಸಾಧಿಸಿದೆ.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಲಕ್ಷಣಗಳು ತೋರಿಬಂದಿರುವುದು, ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿರಂತರ ಖರೀದಿಯಲ್ಲಿ ತೊಡಗಿರುವುದು ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಉತ್ಸಾಹವನ್ನು ತುಂಬಿರುವಂತಿದೆ.
ಇಂದು ಬೆಳಗ್ಗೆ 11.30ರ ಹೊತ್ತಿಗೆ ಸೆನ್ಸೆಕ್ಸ್ 23.74 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,343.09 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 0.20 ಅಂಕಗಳ ಏರಿಕೆಯೊಂದಿಗೆ 10,741.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂಡಸ್ ಇಂಡ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ರಿಲಯನ್ಸ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಒಎನ್‌ಜಿಸಿ, ಝೀ ಎಂಟರ್‌ಟೇನ್‌ಮೆಂಟ್, ಕೋಲ್ ಇಂಡಿಯಾ, ಭಾರ್ತಿ ಏರ್‌ಟೆಲ್, ಟೆಕ್ ಮಹೀಂದ್ರ; ಟಾಪ್ ಲೂಸರ್‌ಗಳು : ಪವರ್ ಗ್ರಿಡ್, ಐಡಿಯಾ ಸೆಲ್ಯುಲರ್, ಡಾ.ರೆಡ್ಡಿ ಲ್ಯಾಬ್, ಟಾಟಾ ಮೋಟರ್, ಎನ್‌ಟಿಪಿಸಿ.