ಮುಂಬಯಿ : ನವೆಂಬರ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ಮಾಡುವ ನ.30ರ ಗಡುವು ಸಮೀಪಿಸಿರುವಂತೆಯೇ ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 16 ಅಂಕಗಳ ನಷ್ಟದಲ್ಲಿ ಇಂದು ಬುಧವಾರದ ವಹಿವಾಟನ್ನು ನಿರಾಶಾದಾಯಕವಾಗಿ ಮುಗಿಸಿತು.
ಉತ್ತರ ಕೊರಿಯ ಇಂದು ಅಮೆರಿಕ ಖಂಡದ ಯಾವುದೇ ಸ್ಥಳವನ್ನು ಗುರಿ ಇರಿಸಿ ನಾಶ ಪಡಿಸುವ ಹೊಂದಿರುವ ತನ್ನ ಅತ್ಯಾಧುನಿಕ ದೂರ ವ್ಯಾಪ್ತಿಯ ಖಂಡಾಂತರ ಅಣು ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಉಡಾಯಿಸಿದುದು ಅಮೆಕರಿದೊಂದಿಗಿನ ಬಿಕ್ಕಟ್ಟನ್ನು ತೀವ್ರಗೊಳಿಸಿದ ವಿದ್ಯಮಾನಕ್ಕೆ ಮುಂಬಯಿ ಸೇರಿದಂತೆ ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳಲ್ಲಿ ನಡುಕ ಕಂಡು ಬಂತು.
ಇಂದು ನಿರಂತರ ಎರಡನೇ ದಿನವೂ ಸೋಲಿನ ಹಾದಿಯಲ್ಲಿ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ದಿನಾಂತ್ಯಕ್ಕೆ 15.83 ಅಂಕಗಳ ನಷ್ಟದೊಂದಿಗೆ 33,602.76 ಅಂಕಗಳ ಮಟ್ಟಕ್ಕೆ ಕುಸಿಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 8.95 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,361.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,319 ಶೇರುಗಳು ಮುನ್ನಡೆ ಸಾಧಿಸಿದವು; 1,382 ಶೇರುಗಳು ಹಿನ್ನಡೆಗೆ ಗುರಿಯಾದವು; 141 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.