Advertisement

RBI ದರ ಪರಿಷ್ಕರಣೆ: ದಾಖಲೆ ಎತ್ತರದಿಂದ ಕೆಳಗಿಳಿದ Sensex, Nifty

05:00 PM Aug 01, 2018 | |

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕದ ಕಳೆದ ಏಳು ದಿನಗಳ ನಿರಂತರ ಗೆಲುವಿನ ಓಟಕ್ಕೆ ಇಂದು ಬುಧವಾರ ಬ್ರೇಕ್‌ ಬಿದ್ದಿದೆ. ಆರ್‌ಬಿಐ ಇಂದು ರಿಪೋ ಮತ್ತು ರಿವರ್ಸ್‌ ರಿಪೋ ದರಗಳನ್ನು 25 ಮೂಲಾಂಶದಷ್ಟು ಏರಿಸಿ ಅನುಕ್ರಮವಾಗಿ ಶೇ.6.50 ಮತ್ತು ಶೇ.6.25ಕ್ಕೆ ನಿಗದಿಸಿರುವುದು ಶೇರು ಮಾರಕಟ್ಟೆಗೆ ಅಪಥ್ಯವಾಯಿತು.

Advertisement

ದಿನಾಂತ್ಯಕ್ಕೆ ಸೆನ್ಸೆಕ್ಸ್‌ 84.96 ಅಂಕಗಳ ನಷ್ಟಕ್ಕೆ ಗುರಿಯಾಗಿ 37,521.62 ಅಂಕಗಳ ಮಟ್ಟಕ್ಕೆ ಇಳಿಯಿತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10.30 ಅಂಕಗಳ ನಷ್ಟಕ್ಕೆ ಗುರಿಯಾಗಿ 11,346.20 ಅಂಕಗಳ ಮಟ್ಟಕ್ಕೆ ಕುಸಿಯಿತು. ಎರಡೂ ಸೂಚ್ಯಂಕಗಳು ಇಂದು ಬೆಳಗ್ಗಿನ ತಮ್ಮ ಸಾರ್ವಕಾಲಿಕ ಮಟ್ಟದ ದಾಖಲೆಯ ಎತ್ತರದಿಂದ ಕೆಳಗಿಳಿದವು.

ಬಡ್ಡಿ ದರ ಸೂಕ್ಷ್ಮತೆಯನ್ನು ಹೊಂದಿರುವ ಆಟೋ, ಫಿನಾನ್ಸ್‌ ಮತ್ತು ಬ್ಯಾಂಕಿಂಗ್‌ ರಂಗದ ಶೇರುಗಳು ಇಂದು ಹಿನ್ನಡೆಗೆ ಗುರಿಯಾದವು. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,840 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,401 ಶೇರುಗಳು ಮುನ್ನಡೆ ಕಂಡವು; 1,295 ಶೇರುಗಳು ಹಿನ್ನಡೆಗೆ ಗುರಿಯಾದವು; 144 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next