ಮುಂಬಯಿ : ಏಶ್ಯನ್ ಶೇರುಮಾರುಕಟ್ಟೆಗಳಲ್ಲಿ ತೋರಿ ಬಂದ ದುರ್ಬಲ ಪ್ರವೃತ್ತಿಯನ್ನು ಅನುಸರಿಸಿ ಹೂಡಿಕೆದಾರರು ಮತ್ತು ವಹಿವಾಟುದಾರರು ಹೆಲ್ತ್ ಕೇರ್, ಬ್ಯಾಂಕಿಂಗ್, ಮೆಟಲ್ ಮತ್ತು ರಿಯಲ್ಟಿ ರಂಗದ ಶೇರುಗಳನ್ನು ಲಾಭನಗದೀಕರಣದ ಮಾರಾಟಕ್ಕೆ ಮುಂದಾಗುವುದರೊಂದಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 57 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 820.57 ಅಂಕಗಳನ್ನು ಸಂಪಾದಿಸಿತ್ತು.
ಬೆಳಗ್ಗೆ 10.20ರ ಹೊತ್ತಿಗೆ ಸೆನ್ಸೆಕ್ಸ್ 17.49 ಅಂಕಗಳ ನಷ್ಟದೊಂದಿಗೆ 35,147.99 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.50 ಅಂಕಗಳ ನಷ್ಟದೊಂದಿಗೆ 10,688.20 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಲಾರ್ಸನ್, ವೇದಾಂತ, ಟಿಸಿಎಸ್, ಮಾರುತಿ ಸುಜುಕಿ ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಐಡಿಯಾ ಸೆಲ್ಯುಲರ್, ಗೇಲ್, ಲಾರ್ಸನ್, ಲೂಪಿನ್, ಸನ್ ಫಾಮಾರ; ಟಾಪ್ ಲೂಸರ್‌ಗಳು : ವೇದಾಂತ, ಭಾರ್ತಿ ಇನ್‌ಫ್ರಾಟೆಲ್, ಐಸಿಐಸಿಐ ಬ್ಯಾಂಕ್, ಎಸ್ ಬಿ ಐ, ಯುಪಿಎಲ್.