Advertisement

ಸಮರೋನ್ಮಾದಕ್ಕೆ ಬೆದರಿದ ಮುಂಬಯಿ ಶೇರು ಪೇಟೆ: 266 ಅಂಕ ನಷ್ಟ

05:00 PM Aug 10, 2017 | |

ಮುಂಬಯಿ : ಉತ್ತರ ಕೊರಿಯ – ಅಮೆರಿಕ ನಡುವೆ ತಾರಕಕ್ಕೇರುತ್ತಿರುವ ಸಮರೋನ್ಮಾದದಿಂದಾಗಿ ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳ ಮೇಲೆ ಕರಿ ನೆರಳು ಚಾಚಿಕೊಳ್ಳುತ್ತಿದ್ದು  ಮುಂಬಯಿ ಶೇರು ಪೇಟೆಯ ಮೇಲೂ ಆದರ ಪರಿಣಾಮ ಕಾಣಿಸಿಕೊಂಡಿದೆ. 

Advertisement

ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 266.51 ಅಂಕಗಳ ನಷ್ಟವನ್ನು ನಿರಂತರ ನಾಲ್ಕನೇ ದಿನವಾಗಿ ಅನುಭವಿಸಿದ್ದು ದಿನದ ವಹಿವಾಟನ್ನು 31,531.33 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 87.80 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,820.25 ಅಂಕಗಳ ಮಟ್ಟದಲ್ಲಿ ಮುಕ್ತಾಯಗೊಳಿಸಿದೆ. 

ಸಿಕ್ಕಿಂನ ಡೋಕ್‌ಲಾಂ ಗಡಿಯಲ್ಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಭಾರತೀಯ ಸೇನೆ ಆದೇಶಿಸಿರುವ ಸುದ್ದಿ ಕೂಡ ಮುಂಬಯಿ ಶೇರಿನ ಮೇಲೆ ದುಷ್ಕರಿಣಾಮ ಬೀರಿತು. 

ವಹಿವಾಟಿನ ನಡುವೆ ಇಂದು ಸೆನ್ಸೆಕ್ಸ್‌ 375 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಕೊನೇ ತಾಸಿನ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು.

Advertisement

ಮಾರುಕಟ್ಟೆ ಹರಹು ಇಂದು ದುರ್ಬಲವಾಗಿತ್ತು. ಮುನ್ನಡೆ ಕಂಡ ಪ್ರತಿಯೊಂದು ಶೇರಿಗೆ ಆರು ಶೇರುಗಳು ಹಿನ್ನಡೆಗೆ ಗುರಿಯಾದವು. 

ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾಗಿರುವ ಸೆಬಿ, ಸುಮಾರು 331 ಕಂಪೆನಿಗಳನ್ನು ನಕಲಿ ಕಂಪೆನಿಗಳೆಂದು ಪಟ್ಟಿಮಾಡಿರುವುದು, ಈ ಪೈಕಿಯ 24ಕ್ಕೂ ಅಧಿಕ ಪ್ರಮುಖ ಕಂಪೆನಿಗಳು ವಿದೇಶಿ ಹೂಡಿಕೆದಾರರು, ಮ್ಯೂಚವಲ್‌ ಫ‌ಂಡ್‌ಗಳು ಹಣ ಹೂಡಿ ಸಿಲುಕಿಕೊಂಡಿರುವುದು ಶೇರು ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next