ಮುಂಬಯಿ : ಇಂದು ಆರಂಭವಾಗಲಿರುವ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆಯ ಸಭೆಯ ಫಲಿತಾಂಶವನ್ನು ಕಾತರದಿಂದ ಕಾಯುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 137 ಅಂಕಗಳ ನಷ್ಟದೊಂದಿಗೆ ನಿರಾಶಾದಾಯಕವಾಗಿ ಆರಂಭಿಸಿತು.
2018-19ರ ಆರ್‌ಬಿಐ ದ್ವಿತೀಯ ದ್ವೆ„ಮಾಸಿಕ ಹಣಕಾಸು ನೀತಿಯ ಸಭೆಯು ಇಂದು ಜೂನ್ 4ರಿಂದ ಆರಂಭವಾಗಿ ಜೂನ್6ರ ವರೆಗೆ ನಡೆಯಲಿದೆ.
ಬೆಳಗ್ಗೆ 10.20ರ ಹೊತ್ತಿಗೆ ಸೆನ್ಸೆಕ್ಸ್ 20.48 ಅಂಕಗಳ ನಷ್ಟದೊಂದಿಗೆ 35,206.78 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 13.30 ಅಂಕಗಳ ನಷ್ಟದೊಂದಿಗೆ 10,682.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್, ಎಸ್ ಬ್ಯಾಂಕ್, ರಿಲಯನ್ಸ್, ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗದ್ದವು.
ಟಾಪ್ ಗೇನರ್‌ಗಳು : ಡಾ. ರೆಡ್ಡಿ ಲ್ಯಾಬ್, ಐಡಿಯಾ ಸೆಲ್ಯುಲರ್, ಎಸ್ ಬ್ಯಾಂಕ್, ಮಹೀ,ದ್ರ, ಇನ್‌ಫೋಸಿಸ್; ಟಾಪ್ ಲೂಸರ್‌ಗಳು : ಎಚ್ ಡಿ ಎಫ್ ಸಿ ಬ್ಯಾಂಕ್, ಏಶ್ಯನ್ ಪೇಂಟ್ಸ್, ಅದಾನಿ ಪೋರ್ಟ್, ಟೈಟಾನ್ ಕಂಪೆನಿ, ಎಚ್‌ಯುಎಲ್.
ಡಾಲರ್ ಎದುರು ರೂಪಾಯಿ 21 ಪೈಸೆಯಷ್ಟು ಚೇತರಿಸಿಕೊಂಡು 66.85 ರೂ.ಗಳ ಒಂದು ತಿಂಗಳ ಹೊಸ ಎತ್ತರವನ್ನು ತಲುಪಿತು.