ಮುಂಬಯಿ : ಮುಂಬಯಿ ಶೇರು ಪೇಟೆ ನಿರಂತರ ಆರನೇ ದಿನವೂ ಕುಸಿತದ ಹಾದಿಯಲ್ಲಿ ಸಾಗಿದ್ದು ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 133 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ವಹಿವಾಟುದಾರರು ಬ್ಯಾಂಕಿಂಗ್, ಮೆಟಲ್ ಮತ್ತು ಪವರ್ ಸ್ಟಾಕ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಲು ಮುಂದಾದದ್ದೇ ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾಯಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 109.34 ಅಂಕಗಳ ನಷ್ಟದೊಂದಿಗೆ 33,207.86 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44 ಅಂಕಗಳ ನಷ್ಟದೊಂದಿಗೆ 10,205.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದಿನ ಆರಂಭಿಕ ವಹಿವಾಟಿನಲ್ಲಿ 8 ಪೈಸೆಯಷ್ಟು ಸುಧಾರಿಸಿಕೊಂಡು 64.88 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಏಶ್ಯನ್ ಶೇರುಮಾರುಕಟ್ಟೆಗಳ ಪೈಕಿ ಸ್ಟ್ರೇಟ್ ಟೈಮ್ಸ್ ಶೇ.0.82, ಜಪಾನಿನ ನಿಕ್ಕಿ ಶೇ.0.80 ಮತ್ತು ಹ್ಯಾಂಗ್ ಸೆಂಗ್ ಶೇ.0.72ರ ಕುಸಿತಕ್ಕೆ ಗುರಿಯಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾ,ಕ್, ಮಾರುತಿ ಸುಜುಕಿ, ಟಾಟಾ ಮೋಟರ್, ಎಸ್‌ಬಿಐ ಮತ್ತು ರಿಲಯನ್ಸ್ ಅತ್ಯಂತ ಕ್ರಿಯಾಶೀಲವಾಗಿದ್ದವು.