ಮುಂಬಯಿ : ಜಾಗತಿಕ ಹಾಗೂ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿನ ದೌರ್ಬಲ್ಯವನ್ನು ಅನುಸರಿಸಿರುವ ಮುಂಬಯಿ ಶೇರು ಪೇಟೆ ಇಂದು ನಿರಂತರ ಐದನೇ ದಿನವೂ ಕುಸಿತಕ್ಕೆ ಗುರಿಯಾಗಿದ್ದು 296 ಅಂಕಗಳ ನಷ್ಟವನ್ನು ಅನುಭವಿಸಿತು.
ಇಂದು ಸೋಮವಾರದ ವಹಿವಾಟನ್ನುಸೆನ್ಸೆಕ್ಸ್ 295.81 ಅಂಕಗಳ ನಷ್ಟದೊಂದಿಗೆ 31,626.63 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 91.80 ಅಂಕಗಳ ನಷ್ಟದೊಂದಿಗೆ 9,872.60 ಅಂಕಗಳ ಮಟ್ಟದಲ್ಲೂ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಉತ್ತರ ಕೊರಿಯ ಉದ್ವಿಗ್ನತೆ, ಫೆಡ್ ಬ್ಯಾಂಕ್ ರೇಟ್ ಏರುವುದೆಂಬ ಭಯ, ಡಾಲರ್ ಎದುರಿನ ರೂಪಾಯಿ ವಿನಿಮಯ ದರ ಕುಸಿತ, ಹೆಚ್ಚುತ್ತಿರುವ ವಿದೇಶೀ ಬಂಡವಾಳದ ಹೊರ ಹರಿವು – ಮುಂತಾಗಿ ಹಲವಾರು ಕಾರಣಗಳು ಮುಂಬಯಿ ಶೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗಿವೆ.
ಇಂದಿನ ವಹಿವಾಟಿನಲ್ಲಿ 596 ಶೇರುಗಳು ಹಿನ್ನಡೆಗೆ ಗುರಿಯಾದರೆ 423 ಶೇರುಗಳು ಮುನ್ನಡೆಯನ್ನು ಕಂಡವು. ನಿಫ್ಟಿ ಮಿಡ್ ಕ್ಯಾಪ್ ಶೇ.0.8ರ ಕುಸಿತಕ್ಕೆ ಗುರಿಯಾಯಿತು.
ಇಂದಿನ ಟಾಪ್ ಗೇನರ್‌ಗಳು : ಟಾಟಾಪವರ್, ಕೋಲ್ ಇಂಡಿಯಾ, ಝಿ ಎಂಟರ್‌ಟೇನ್‌ಮೆಂಟ್, ಐಸಿಐಸಿಐ ಬ್ಯಾಂಕ್, ಎಚ್‌ಯುಎಲ್; ಟಾಪ್ ಲೂಸರ್‌ಗಳು : ಎಸಿಸಿ, ಅರಬಿಂದೋ ಫಾರ್ಮಾ, ಅದಾನಿ ಪೋರ್ಟ್, ಅಂಬುಜಾ ಸಿಮೆಂಟ್ಸ್ , ಐಡಿಯಾ ಸೆಲ್ಯುಲರ್.