ಮುಂಬಯಿ : ಕೊನೇ ಕ್ಷಣದಲ್ಲಿ ನಡೆದ ಲಾಭನಗದೀಕರಣದ ಮಾರಾಟದಿಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 144 ಅಂಕಗಳ ನಷ್ಟದೊಂದಿಗೆ 34,156 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸರಕಾರಿ ಒಡೆತನದ ಪಂಜಾಬ್ ನ್ಯಾಶನಲ್ ಬ್ಯಾಂಕ್ ಇಂದು ಬುಧವಾರ ಮುಂಬಯಿಯಲ್ಲಿನ ತನ್ನ ಕೆಲವು ಶಾಖೆಗಳಲ್ಲಿ 1.77 ಶತಕೋಟಿ ಡಾಲರ್‌ಗಳ ವಂಚನೆ ಮತ್ತು ಅನಧಿಕೃತ ವಹಿವಾಟು ನಡೆದಿರುವುದನ್ನು ತಾನು ಪತ್ತೆ ಹಚ್ಚಿರುವುದಾಗಿ ನೀಡಿದ ಹೇಳಿಕೆಯಿಂದ ಶೇರು ಮಾರುಕಟ್ಟೆಯಲ್ಲಿ ನಡುಕ ಉಂಟಾಯಿತು. ಪರಿಣಾಮವಾಗಿ ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭನಗದೀಕರಣದ ನೆಪದಲ್ಲಿ ಬೇಕಾಬಿಟ್ಟಿ ಶೇರು ಮಾರಿದರು.
ಆಯ್ದ ಕೆಲವು ಖಾತೆದಾರರ ಲಾಭಕ್ಕಾಗಿ ಮತ್ತು ಅವರಿಗೆ ಗೊತ್ತಿರುವ ರೀತಿಯಲ್ಲೇ ಈ ಅನಧಿಕೃತ ಮತ್ತು ವಂಚನೆಯ ವಹಿವಾಟುಗಳು ನಡೆದಿದ್ದು ಈ ವಹಿವಾಟುಗಳ ಆಧಾರದಲ್ಲಿ ಇತರ ಬ್ಯಾಂಕುಗಳು ವಿದೇಶದಲ್ಲಿನ ಆ ಗ್ರಾಹಕರಿಗೆ ಬೃಹತ್ ಮೊತ್ತದ ಸಾಲ ನೀಡಿರುವುದು ಕಂಡು ಬಂದಿದೆ; ಈ ವಿಷಯವನ್ನು ತಾನು ನಿಯಂತ್ರಣ ಸಂಸ್ಥೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದ್ದೇನೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಹೇಳಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 38.85 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,500.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಿದೇಶಿ ಹೂಡಿಕೆದಾರರು ಇಂದು 814.11 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಿದುದು ಶೇರು ಪೇಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಆದರೆ ಇದೇ ವೇಳೆ ದೇಶೀಯ ಹೂಡಿಕೆದಾರ