ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿ ಬಂದಿರುವುದು ಹಾಗೂ ಇಂದು ಸರಕಾರ ಬಿಡುಗಡೆ ಮಾಡಲಿರುವ ದೇಶದ ಸ್ಥೂಲ ಆರ್ಥಿಕ ಪ್ರಗತಿಯ ಅಂಕಿ ಅಂಶಗಳ ಬಗ್ಗೆ ಆಶಾಭಾವನೆ ಇರುವ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 84 ಅಂಕಗಳ ಮುನ್ನಡೆಯನ್ನು ಸಾಧಿಸಿತು. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,800ರ ಮಟ್ಟವನ್ನು ಪುನರ್ ಸಂಪಾದಿಸಿತು.
ಎಪ್ರಿಲ್ ತಿಂಗಳ ಕೈಗಾರಿಕೋತ್ಪಾದನೆ ಅಂಕಿ ಅಂಶ ಮತ್ತು ಮೇ ತಿಂಗಳ ಗ್ರಾಹಕ ಹಣದುಬ್ಬರ ಸೂಚ್ಯಂಕ ಇಂದು ಸಂಜೆಯೊಳಗೆ ಬಿಡುಗಡೆಯಾಗಲಿರುವಂತೆಯೇ ಆಶಾವಾದಿಗಳಾದ ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಶೇರುಗಳ ಉತ್ತಮ ಖರೀದಿಯಲ್ಲಿ ತೊಡಗಿಕೊಂಡದ್ದೇ ಇಂದಿನ ತೇಜಿಗೆ ಕಾರಣವಾಯಿತು.
ಹೆಲ್ತ್ ಕೇರ್ ಕನ್ಸೂಮರ್ ಡ್ಯುರೆಬಲ್ಸ್, ಆಯಿಲ್ ಆ್ಯಂಡ್ ಗ್ಯಾಸ್, ಬ್ಯಾಂಕಿಂಗ್ ಮತ್ತು ಆಟೋ ರಂಗದ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಶೇ.0.84ರ ಏರಿಕೆಯನ್ನು ಕಂಡವು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 143.78 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,621.25 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 42.10 ಅಂಕಗಳ ಮುನ್ನಡೆಯೊಂದಿಗೆ 10,829.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಪ್ ಗೇನರ್‌ಗಳು : ಲೂಪಿನ್, ಡಾ.ರೆಡ್ಡಿ ಲ್ಯಾಬ್, ಟಿಸಿಎಸ್, ಸನ್ ಫಾರ್ಮಾ, ವಿಪ್ರೋ; ಟಾಪ್ ಲೂಸರ್‌ಗಳು : ಟಾಟಾ ಸ್ಟೀಲ್, ಪವರ್ ಗ್ರಿಡ್, ಹಿಂಡಾಲ್ಕೊ, ವೇದಾಂತ, ಟೆಕ್ ಮಹೀಂದ್ರ.