Advertisement

ಫೀನಿಕ್ಸ್‌ ಆದ ಮುಂಬಯಿ ಶೇರು : ಸೆನ್ಸೆಕ್ಸ್‌ 659 ಅಂಕ ಜಂಪ್‌

10:40 AM Oct 12, 2018 | udayavani editorial |

ಮುಂಬಯಿ : ನಿನ್ನೆ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಒಂದು ಸಾವಿರಕ್ಕೂ ಅಧಿಕ ಅಂಕಗಳನ್ನು ಕಳೆದುಕೊಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಫೀನಿಕ್ಸ್‌ ಹಕ್ಕಿಯಂತೆ ಅಸಾಮಾನ್ಯವಾಗಿ ಎದ್ದು ಬಂದು ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 600ಕ್ಕೂ ಅಧಿಕ ಅಂಕಗಳ ಮುನ್ನಡೆಯನು ಸಾಧಿಸಿತು. 

Advertisement

ಆರ್ಥಿಕ ಪ್ರಗತಿಯ ಅಂಕಿ ಅಂಶಗಳು ಇಂದು ಪ್ರಕಟಗೊಳ್ಳುವುದನ್ನು ಕಾಯುತ್ತಿರುವ ಶೇರು ಪೇಟೆಯಲ್ಲಿ ಇಂದು ದೇಶೀಯ ಹೂಡಿಕೆದಾರ ಸಂಸ್ಥೆಗಳು ಮತ್ತು ವಹಿವಾಟುದಾರರು ಭರಾಟೆಯ ಖರೀದಿಯಲ್ಲಿ ತೊಡಗಿಕೊಂಡದ್ದೇ ಶೇರು ಪೇಟೆಯಲ್ಲಿನ ತೇಜಿಗೆ ಕಾರಣವಾಯಿತು. 

ಇದೇ ರೀತಿ ಇಂದು ಬೆಳಗ್ಗೆ  ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ತೋರಿಬಂತು. ನಿನ್ನೆ ಗುರುವಾರದ ವಹಿವಾಟನ್ನು ಸೆನ್ಸೆಕ್ಸ್‌ 750 ಅಂಕಗಳ ನಷ್ಟದೊಂದಿಗೆ ಆರು ತಿಂಗಳ ಕನಿಷ್ಠ ಮಟ್ಟದಲ್ಲಿ ಕೊನೆಗೊಳಿಸಿತ್ತು.

ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್‌ 659.29 ಅಂಕಗಳ ನಷ್ಟದೊಂದಿಗೆ 34,660.44 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 202.10 ಅಂಕಗಳ ಏರಿಕೆಯೊಂದಿಗೆ 10,346.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಟಿಸಿಎಸ್‌, ಎ ಬ್ಯಾಂಕ್‌, ರಿಲಯನ್ಸ್‌, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫಿನಾನ್ಸ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

Advertisement

ಇಂದಿನ ಆರಂಭಿಕ ವಹಿವಾಟಿನ ಟಾಪ್‌ ಗೇನರ್‌ಗಳು : ವೋಡಾ ಫೋನ್‌ ಐಡಿಯಾ, ಬಜಾಜ್‌ ಫಿನಾನ್ಸ್‌, ಮಹೀಂದ್ರ, ಐಟಿಸಿ, ಎಸ್‌ ಬ್ಯಾಂಕ್‌. ಟಾಪ್‌ ಲೂಸರ್‌ಗಳು : ಟಿಸಿಎಸ್‌, ಎಚ್‌ ಸಿ ಎಲ್‌ ಟೆಕ್‌, ಇನ್‌ಫೋಸಿಸ್‌, ವಿಪ್ರೋ, ಡಾ. ರೆಡ್ಡಿ ಲ್ಯಾಬ್‌. 

ಡಾಲರ್‌ ಎದುರು ರೂಪಾಯಿ ಇಂದು 38 ಪೈಸೆಯ ಉತ್ತಮ ಚೇತರಿಕೆಯನ್ನು ಕಂಡುಕೊಂಡು 73.74ರ ಮಟ್ಟಕ್ಕೆ ಏರುವುದರೊಂದಿಗೆ ದೃಢತೆಯ ಲಕ್ಷಣ ತೋರ್ಪಡಿಸಿತು. ಇದೇ ವೇಳೆ ಬ್ರೆಂಟ್‌ ಕಚ್ಚಾ ತೈಲ ಶೇ.3 ರಷ್ಟು ಕುಸಿದು ಜಾಗತಿಕ ಮಾರುಕಟ್ಟೆಗಳಲ್ಲಿ  ಬ್ಯಾರಲ್‌ ಗೆ 80.37 ಡಾಲರ್‌ ನಲ್ಲಿ ಬಿಕರಿಯಾಗತೊಡಗಿತು. 

Advertisement

Udayavani is now on Telegram. Click here to join our channel and stay updated with the latest news.

Next