Advertisement

ಮುಂಬಯಿ ಶೇರು 150 ಅಂಕ ಜಿಗಿತ; ಮತ್ತೆ 35,000 ಮಟ್ಟಕ್ಕೆ

10:42 AM May 28, 2018 | udayavani editorial |

ಮುಂಬಯಿ : ಅಂತಾರಾಷ್ಟೀಯ ಕಚ್ಚಾ ತೈಲ ಬೆಲೆಯಲ್ಲಿ ಗಮನಾರ್ಹ ಕಡಿತ ಉಂಟಾಗಿರುವುದು ಮತ್ತು ಜಾಗತಿಕ ಭೂರಾಜಕಾರಣ ಬಿಕ್ಕಟ್ಟು ಕೊಂಚ ಮಟ್ಟಿಗೆ ಶಮನವಾಗಿರುವ ಹಿನ್ನೆಲೆಯಲ್ಲಿ ಮುಂಬಯ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಜಿಗಿತವ ಸಾಧಿಸಿ 35,000 ಅಂಕಗಳ ಮಟ್ಟವನ್ನು ಪುನರ್‌ ಸಂಪಾದಿಸಿತು. 

Advertisement

ಡಾಲರ್‌ ಎದುರು ರೂಪಾಯಿ 39 ಪೈಸೆ ಚೇತರಿಸಿಕೊಂಡು 67.39 ರೂ. ಮಟ್ಟಕ್ಕೆ ಏರಿರುವುದು ಶೇರು ಮಾರುಕಟ್ಟೆಗೆ ಇಂದು ಉತ್ತೇಜನ ನೀಡಿತು. ಕಚ್ಚಾ ತೈಲ ಬೆಲೆ ಇಳಿದಿರುವ ಪ್ರಯುಕ್ತ ಇತರ ಕರೆನ್ಸಿಗಳ ಎದುರು ಡಾಲರ್‌ ಸ್ವಲ್ಪ ಮಟ್ಟಿಗೆ ಮೆದುವಾಗಿರುವುದು ಮತ್ತು ಏಶ್ಯನ್‌ ಶೇರು ಪೇಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿ ಬಂದಿರವುದು ಮುಂಬಯಿ ಶೇರು ಪೇಟೆಯ ತೇಜಿಗೆ ಇಂದು ಕಾರಣವಾಯಿತು. 

ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್‌ 204.92 ಅಂಕಗಳ ಮುನ್ನಡೆಯೊಂದಿಗೆ 35,129.79 ಅಂಕಗಳ ಮಟ್ಟದಲ್ಲೂ  ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 66.50 ಅಂಕಗಳ ಮುನ್ನಡೆಯೊಂದಿಗೆ 10,671.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಟಾಪ್‌ ಗೇನರ್‌ಗಳು : ಸನ್‌ ಫಾರ್ಮಾ, ಬಿಪಿಸಿಎಲ್‌, ಎಚ್‌ಪಿಸಿಎಲ್‌, ಲೂಪಿನ್‌, ಕೋಲ್‌ ಇಂಡಿಯಾ; ಟಾಪ್‌ ಲೂಸರ್‌ಗಳು : ಟೆಕ್‌ ಮಹೀಂದ್ರ, ಟಿಸಿಎಸ್‌, ಎಚ್‌ಸಿಎಲ್‌ ಟೆಕ್‌, ಹಿಂಡಾಲ್ಕೊ, ಝೀ ಎಂಟರ್‌ಟೇನ್‌ಮೆಂಟ್‌.

Advertisement

Udayavani is now on Telegram. Click here to join our channel and stay updated with the latest news.

Next