Advertisement

ಮುಂಬಯಿ ಶೇರು ಭರ್ಜರಿ 346 ಅಂಕ ಏರಿಕೆ, ಮತ್ತೆ 33,000 ಮಟ್ಟ

04:54 PM Nov 16, 2017 | |

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 346.38 ಅಂಕಗಳ ಭರ್ಜರಿ ಏರಿಕೆಯೊಂದಿಗೆ 33,106.82 ಅಂಕಗಳ ಮಟ್ಟದಲ್ಲಿ ದೃಢತೆಯೊಂದಿಗೆ ಕೊನೆಗೊಳಿಸಿದೆ. ಇದು ವಾರದ ಗರಿಷ್ಠ ಮಟ್ಟವಾಗಿ ದಾಖಲಾಗಿದೆ. 

Advertisement

ಕಳೆದ ಮೂರು ದಿನಗಳ ವಹಿವಾಟಿನಲ್ಲಿ ನಿರಂತರ ಸೋಲನ್ನು ಕಾಣುತ್ತ ಒಟ್ಟು 554.12 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್‌ ಇಂದು ಭರ್ಜರಿ ಏರಿಕೆಯನ್ನು ದಾಖಲಿಸಿ 33,000 ಅಂಕಗಳ ಪ್ರಬಲ ಮಟ್ಟವನ್ನು ಪುನರ್‌ ಸಂಪಾದಿಸಿರುವುದು ಅತ್ಯಂತ ವಿಶೇಷ ಎನಿಸಿತು. 

ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದ ಕಾರಣ ಇಂದು ಶೇರುಗಳು ವಿಜೃಂಭಿಸಿದವು. ಇವುಗಳಲ್ಲಿ ರಿಲಯನ್ಸ್‌ ಶೇರು ರಾಲಿಯ ನೇತೃತ್ವ ವಹಿಸಿತು. ಇನ್‌ಫೋಸಿಸ್‌ ಕೂಡ ಭರ್ಜರಿ ಏರಿಕೆಯನ್ನು ದಾಖಲಿಸಿತು. 

ಸೆನ್ಸೆಕ್ಸ್‌ ನಂತೆ ರಾಷ್ಟ್ರೀಯ ಶೇರು ಪೇಟೆ ನಿಫ್ಟಿ ಸೂಚ್ಯಂಕ ಕೂಡ ಇಂದು ವಿಜೃಂಭಿಸಿತು. 96.70 ಅಂಕಗಳ ಏರಿಕೆಯೊಂದಿಗೆ ನಿಫ್ಟಿ ದಿನದ ವಹಿವಾಟನ್ನು 10,232.25 ಅಂಕಗಳ ಮಟ್ಟದಲ್ಲಿ ಹೊಸ ವಿಶ್ವಾಸದೊಂದಿಗೆ ಕೊನೆಗೊಳಿಸಿತು. 

ಜಾಗತಿಕ ಶೇರು ಪೇಟೆಯಲ್ಲಿನ ಸ್ಥಿರತೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯಲ್ಲಿ  ಹೂಡಿಕೆದಾರರು ಮೌಲ್ಯಯುತ ಮುಂಚೂಣಿ ಶೇರುಗಳ ಭರಾಟೆಯ ಖರೀದಿ ನಡೆಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next