ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿ ಬಂದಿರುವುದು ಹಾಗೂ ಕಾರ್ಪೊರೇಟ್ ಫಲಿತಾಂಶಗಳು ಹೆಚ್ಚು ಸದೃಢವಾಗಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 295 ಅಂಕಗಳ ಉತ್ತಮ ಜಿಗಿತದೊಂದಿಗೆ 34,400 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 84.80 ಅಂಕಗಳ ಜಿಗಿತದೊಂದಿಗೆ 10,539.75 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಆಶಾದಾಯಕವಾಗಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಕಳೆದ ಶುಕ್ರವಾರ 407.40 ಅಂಕಗಳ ನಷ್ಟವನ್ನು ಅನುಭವಿಸಿ 34,005.76 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತ್ತು.
ಇಂದಿನ ಟಾಪ್ ಗೇನರ್‌ಗಳು : ಟಾಟಾ ಸ್ಟೀಲ್, ಎಸ್ ಬ್ಯಾಂಕ್, ಅರಬಿಂದೋ ಫಾರ್ಮಾ, ಪವರ್ ಗ್ರಿಡ್ ಕಾರ್ಪೊರೇಶನ್, ಯುಪಿಎಲ್; ಟಾಪ್ ಲೂಸರ್‌ಗಳು : ಎಸ್‌ಬಿಐ, ಎಚ್‌ಸಿಎಲ್ ಟೆಕ್, ಬಿಪಿಸಿಎಲ್, ಎಚ್‌ಪಿಸಿಎಲ್, ಭಾರ್ತಿ ಇನ್‌ಫ್ರಾಟೆಲ್.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,977 ಶೇರುಗಳು ವಹಿವಾಟಿಗೆ ಒಳಪಟ್ಟವು; 2,033 ಶೇರುಗಳು ಮುನ್ನಡೆ ಸಾಧಿಸಿದವವು; 770 ಶೇರುಗಳು ಹಿನ್ನಡೆಗೆ ಗುರಿಯಾದವು; ಕೇವಲ 174 ಶೇರು ಗಳು ಯಾವುದೇ ಬದಲಾವಣೆ ಕಾಣಲಿಲ್ಲ.