ಮುಂಬಯಿ: ಕಳೆದ ವಾರ ದೀಪಾವಳಿಯ ಮೂಹರ್ತ ವಹಿವಾಟಿನಲ್ಲಿ ಶೇ.1ಕ್ಕೂ ಅಧಿಕ ಕುಸಿತವನ್ನು ಕಂಡಿದ್ದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ, ಇಂದು ಫೀನಿಕ್ಸ್‌ನಂತೆ ಮತ್ತೆ ಎದ್ದು ಬಂದು, ಇಂದಿನ ಸೋಮವಾರದ ವಹಿವಾಟನ್ನು 116.76 ಅಂಕಗಳ ಏರಿಕೆಯೊಂದಿಗೆ 32,506.72 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 38.40 ಅಂಕಗಳ ಏರಿಕೆಯನ್ನು ಕಂಡು ದಿನದ ವಹಿವಾಟನ್ನು 10,184.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,421 ಶೇರುಗಳು ಹಿನ್ನಡೆಗೆ ಗುರಿಯಾದವು; 1,293 ಶೇರುಗಳು ಮುನ್ನಡೆ ಸಾಧಿಸಿದವು.
ಹೀರೋ ಮೋಟೋ ಕಾರ್ಪ್, ಭಾರ್ತಿ ಏರ್‌ಟೆಲ್, ಡಾ. ರೆಡ್ಡಿ, ಇನ್‌ಫೋಸಿಸ್, ಎಚ್‌ಯುಎಲ್, ಸಿಪ್ಲಾ, ಟಿಸಿಎಸ್, ರಿಲಯನ್ಸ್ ಶೇರುಗಳು ಶೇ.1ರಿಂದ 2ರಷ್ಟು ಏರಿಕೆಯನ್ನು ಕಂಡದ್ದು ಇಂದಿನ ಮುಖ್ಯಾಂಶವೆನಿಸಿತು.
ಇಂದಿನ ಟಾಪ್ ಗೇನರ್‌ಗಳು : ಐಡಿಯಾ ಸೆಲ್ಯುಲರ್, ಭಾರ್ತಿ ಏರ್‌ಟೆಲ್, ಅಲ್‌ಟ್ರಾ ಟೆಕ್ ಸಿಮೆಂಟ್, ರಿಲಯನ್ಸ್, ಅಂಬುಜಾ ಸಿಮೆಂಟ್ಸ್.
ಟಾಪ್ ಲೂಸರ್‌ಗಳು: ಸಿಪ್ಲಾ, ಭಾರ್ತಿ ಇನ್‌ಫ್ರಾಟೆಲ್, ಎಕ್ಸಿಸ್ ಬ್ಯಾಂಕ್, ಯುಪಿಎಲ್, ಕೋಟಕ್ ಮಹೀಂದ್ರ.