ಮುಂಬಯಿ : ಡಾಲರ್ ಎದುರು ಕಂಡ ಜೀವಮಾನದ ತಳಮಟ್ಟದಿಂದ ಮೇಲೆದ್ದ ರೂಪಾಯಿ ಚೇತರಿಕೆ ನಡುವೆಯೇ ದಿನಪೂರ್ತಿ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ವಹಿವಾಟಿನಲ್ಲಿ ದೃಢ ಪುನರಾಗಮನ ದಾಖಲಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 114 ಅಂಕಗಳ ಏರಿಕೆಯೊಂದಿಗೆ 35,378.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹೂಡಿಕೆದಾರರು ಮತ್ತು ವಹಿವಾಟುದಾರರು ಈಚೆಗೆ ನೆಲಕಚ್ಚಿದ ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡದ್ದೇ ಮುಂಬಯಿ ಶೇರು ಪೇಟೆಯ ಇಂದಿನ ತೇಜಿಗೆ ಕಾರಣವಾಯಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 42.60 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,699.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸನ್ ಫಾರ್ಮಾ, ಮಾರುತಿ ಸುಜುಕಿ, ಇನ್‌ಫೋಸಿಸ್, ಒಎನ್‌ಜಿಸಿ, ಕೋಟಕ್ ಬ್ಯಾಂಕ್, ಐಟಿಸಿ, ಟಾಟಾ ಸ್ಟೀಲ್, ಟಾಟಾ ಮೋಟರ್, ಆರ್‌ಐಎಲ್, ಟಿಸಿಎಸ್ ಮುಂತಾದ ಮುಂಚೂಣಿ ಶೇರುಗಳು ಶೇ.1.79ರ ಏರಿಕೆಯನ್ನು ಕಂಡವು.
ಇದಕ್ಕೆ ವ್ಯತಿರಿಕ್ತವಾಗಿ ವೇದಾಂತ, ಐಸಿಐಸಿಐ ಬ್ಯಾಂಕ್, ಎಸ್‌ಬಿಐ,ಪವರ್ ಗ್ರಿಡ್, ಎಸ್ ಬ್ಯಾಂಕ್, ಅದಾನಿ ಪೋರ್ಟ್, ಎಚ್‌ಯುಎಲ್, ಏಶ್ಯನ್ ಪೇಂಟ್ಸ್ ಶೇರುಗಳು ಶೇ.3.2ರಷ್ಟು ಕುಸಿತಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,746 ಶೇರುಗಳು ವಹಿವಾಟಿಗೆ ಒಳಪಟ್ಟವು; 1,348 ಶೇರುಗಳು ಮುನ್ನಡೆ ಕಂಡವು; 1,265 ಶೇರುಗಳು ಹಿನ್ನಡೆಗೆ ಗುರಿಯಾದವು; 133 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.