Advertisement

ಮುಂಬಯಿ ಶೇರು 223 ಅಂಕ ಮುನ್ನಡೆ; ನಿಫ್ಟಿ 10,458

03:54 PM Dec 19, 2017 | |

ಮುಂಬಯಿ : ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿರುವುಕ್ಕೆ ಮುಂಬಯಿ ಶೇರು ಪೇಟೆ ಗರಿಗೆದರಿದ್ದು ಇಂದು ಮಂಗಳವಾರದ ವಹಿವಾಟನ್ನು ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 223.67 ಅಂಕಗಳ ಏರಿಕೆಯೊಂದಿಗೆ 33,25.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 70.10 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 10,458.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದು ವಹಿವಾಟಿಗೆ ಒಳಪಟ್ಟ  ಶೇರುಗಳ ಪೈಕಿ 1,821 ಶೇರುಗಳು ಮುನ್ನಡೆ ಸಾಧಿಸಿದವು; 713 ಶೇರುಗಳು ಹಿನ್ನಡೆಗೆ ಗುರಿಯಾದವು; 154 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

ಇಂದಿನ ಟಾಪ್‌ ಗೇನರ್‌ಗಳಾಗಿ ಮಾರುತಿ, ಹೀರೋ, ಟಾಟಾ ಮೋಟರ್‌, ಬಜಾಜ್‌ ಆಟೋ, ಈಶರ್‌ ಮೋಟರ್‌ ಶೇರುಗಳು ಮೂಡಿ ಬಂದರೆ ಟಾಪ್‌ ಲೂಸರ್‌ಗಳಾಗಿ ವಿಪ್ರೋ, ಇನ್‌ಫೋಸಿಸ್‌, ಎಚ್‌ಸಿಎಲ್‌ ಟೆಕ್‌ ಶೇರುಗಳು ಹಿನ್ನಡೆಗೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next