ಮುಂಬಯಿ : ಜಿಎಸ್‌ಟಿ ಮಂಡಳಿ ರಫ್ತುದಾರರಿಗೆ ಮತ್ತು ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ರಿಯಾಯಿತಿಗಳನ್ನು ಘೋಷಿಸಿದ ಪರಿಣಾಮವಾಗಿ ಮುಂಬಯಿ ಶೇರು ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 67.10 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಆರು ಪೈಸೆಯಷ್ಟೇ ಸುಧಾರಿಸಿಸುವುದು ಕೂಡ ಶೇರು ಮಾರುಕಟ್ಟೆಗೆ ಉತ್ತೇಜನ ನೀಡಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 96.48 ಅಂಕಗಳ ಮುನ್ನಡೆಯೊಂದಿಗೆ 31,910.70 ಅಂಕಗಳ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 25 ಅಂಕಗಳ ಮುನ್ನಡೆಯೊಂದಿಗೆ 10,004.70 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದವು.
ಬ್ಯಾಂಕ್ ನಿಫ್ಟಿ ಇಂದಿನ ಆರಂಭಿಕ ವಹಿವಾಟಿನಲ್ಲಿ 94 ಅಂಕಗಳ ಜಿಗಿತವನ್ನು ಸಾಧಿಸಿದರೆ ನಿಫ್ಟಿ IT 8 ಅಂಕಗಳ ಮುನ್ನಡೆಗೆ ತೃಪ್ತಿಪಟ್ಟಿತು.
ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ರಿಲಯನ್ಸ್, ಇನ್‌ಫೋಸಿಸ್ ಶೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಐಡಿಯಾ ಸೆಲ್ಯುಲರ್, ಸಿಪ್ಲಾ, ಕೋಲ್ ಇಂಡಿಯಾ, ಟಾಟಾ ಮೋಟರ್, ಝೀ ಎಂಟರ್‌ಟೇನ್‌ಮೆಂಟ್ ಮೂಡಿಬಂದವು; ಟಾಪ್ ಲೂಸರ್‌ಗಳಾಗಿ ಪವರ್ ಗ್ರಿಡ್, ಒಎನ್‌ಜಿಸಿ, ಎಚ್‌ಸಿಎಲ್ ಟೆಕ್, ಅದಾನಿ ಪೋರ್ಟ್ ಶೇರುಗಳು ಹಿನ್ನಡೆಗೆ ಗುರಿಯಾದವು.