ಮುಂಬಯಿ : ಎರಡು ದಿನ ನಿರಂತರ ಹಿನ್ನಡೆ ಕಂಡ ಮುಂಬಯಿ ಶೇರು ಪೇಟೆಯ ಸೆನೆಕ್ಸ್ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 130 ಅಂಕಗಳ ಏರಿಕೆಯನ್ನು ದಾಖಲಿಸಿತು.
ಡಾಲರ್ ಎದುರು ರೂಪಾಯಿ ವಿನಿಮಯ ದರ 32 ಪೆಸೆಯಷ್ಟು ಸುಧಾರಿಸಿ 68.06 ರೂ. ಮಟ್ಟಕ್ಕೆ ಏರಿರುವುದು ಮುಂಬಯಿ ಶೇರು ಮಾರುಕಟ್ಟೆಗೆ ಸ್ವಲ್ಪ ಮಟ್ಟಿನ ಉತ್ತೇಜನ ತುಂಬಿತು.
ಬೆಳಗ್ಗೆ 11.45ರ ಹೊತ್ತಿಗೆ ಸೆನ್ಸೆಕ್ಸ್ 161.75 ಅಂಕಗಳ ಏರಿಕೆಯೊಂದಿಗೆ 35,448.49 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44.80 ಅಂಕಗಳ ಏರಿಕೆಯೊಂದಿಗೆ 10,755.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಸಿಪ್ಲಾ, ರಿಲಯನ್ಸ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ರಿಲಯನ್ಸ್, ವೇದಾಂತ, ಝೀ ಎಂಟರ್‌ಟೇನ್‌ಮೆಂಟ್, ಎಕ್ಸಿಸ್ ಬ್ಯಾಂಕ್, ಸಿಪ್ಲಾ; ಟಾಪ್ ಲೂಸರ್‌ಗಳು : ಕೋಲ್ ಇಂಡಿಯಾ, ಯುಪಿಎಲ್, ಡಾ. ರೆಡ್ಡಿ, ಎಚ್‌ಪಿಸಿಎಲ್, ಬಿಪಿಸಿಎಲ್.