ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 600ಕ್ಕೂ ಅಧಿಕ ಅಂಕಗಳ ಭಾರೀ ಕುಸಿತವನ್ನು ಕಂಡಿತು.
ಆಳುವ ಎನ್‌ಡಿಎ ಸರಕಾರಕ್ಕೆ ನಿರಾಶಾದಾಯಕವೆನಿಸಿರುವ ಪಂಚರಾಜ್ಯ ಚುನಾವಣೆಗಳ ಮತಗಟ್ಟೆ ಸಮೀಕ್ಷೆ, ಡಾಲರ್ ಎದುರು ರೂಪಾಯಿ ಕುಸಿತ, ತೈಲ ಬೆಲೆ ಏರಿಕೆ ಮತ್ತು ಚೀನ ಹಾಗೂ ಅಮೆರಿಕ ನಡುವಿನ ವಾಣಿಜ್ಯ ಸುಂಕ ಸಮರ ಮತ್ತೆ ಆರಂಭವಾಗುವ ಭೀತಿಯೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆ ಇಂದು ತೀವ್ರವಾಗಿ ನಲುಗಿತು.
ಬೆಳಗೆ 10.30ರ ಸುಮಾರಿಗೆ ಸೆನ್ಸೆಕ್ಸ್ 596.15 ಅಂಕಗಳ ನಷ್ಟದೊಂದಿಗೆ 35,077.10 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 183.60 ಅಂಕಗಳ ನಷ್ಟದೊಂದಿಗೆ 10,510.15 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 59 ಪೈಸೆಗಳ ಕುಸಿತವನ್ನು ಕಂಡು 71.40 ರೂ.ಗೆ ಇಳಿದದ್ದು ಶೇರು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.
ಬೆಳಗ್ಗಿನ ವಹಿವಾಟಿನಲ್ಲಿಂದು ಕೋಟಕ್ ಮಹೀಂದ್ರ, ರಿಲಯನ್ಸ, ಸನ್‌ಫಾರ್ಮಾ, ಟಿಸಿಎಸ್, ಎಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. ಟಾಪ್ ಗೇನರ್‌ಗಳು : ಟಿಸಿಎಸ್, ಟೆಕ್ ಮಹೀಂದ್ರ, ಟಾಪ್ ಲೂಸರ್‌ಗಳು : ರಿಲಯನ್ಸ್, ಇಂಡಿಯಾಬುಲ್ಸ್ ಹೌಸಿಂಗ್, ಅಲ್‌ಟ್ರಾ ಟೆಕ್ ಸಿಮೆಂಟ್, ಕೋಲ್ ಇಂಡಿಯಾ, ಪವರ್ ಗ್ರಿಡ್.