Advertisement

ಅಮೆರಿಕ-ಚೀನ ವಾಣಿಜ್ಯ ಬಿಕ್ಕಟ್ಟು : ಸೆನ್ಸೆಕ್ಸ್‌ 58 ಅಂಕ ನಷ್ಟ

11:14 AM Aug 24, 2018 | udayavani editorial |

ಮುಂಬಯಿ : ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಬಿಕ್ಕಟ್ಟು ಪರಿಹಾರ ಕಾಣುವ ಸಾಧ್ಯತೆಗಳು ಕ್ಷೀಣಿಸುತ್ತಿರುವಂತೆಯೇ ಜಾಗತಿಕ ಶೇರು ಮಾರುಕಟ್ಟೆಗಳು ನಿಸ್ತೇಜವಾಗಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 58 ಅಂಕಗಳ ಹಿನ್ನಡೆಗೆ ಗುರಿಯಾಯಿತು. 

Advertisement

ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ 673.20 ಅಂಕಗಳನ್ನು ಸಂಪಾದಿಸಿದ ಸೆನ್ಸೆಕ್ಸ್‌ ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ 36.20 ಅಂಕಗಳ ನಷ್ಟದೊಂದಿಗೆ 38,300.47 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12 ಅಂಕಗಳ ನಷ್ಟದೊಂದಿಗೆ 11,570.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಇಂದು ಬೆಳಗ್ಗಿನ ವಹಿವಾಟಿನಲ್ಲಿ ಎಕ್ಸಿಸ್‌ ಬ್ಯಾಂಕ್‌, ರಿಲಯನ್ಸ್‌, ಎಸ್‌ ಬ್ಯಾಂಕ್‌, ಐಸಿಐಸಿ ಬ್ಯಾಂಕ್‌, ಬಜಾಜ್‌ ಫಿನಾನ್ಸ್‌ ಶೇರುಗಳು ಅತ್ಯಂತ ಸಕ್ರಿಯವಾಗಿದ್ದವು.

ಟಾಪ್‌ ಗೇನರ್‌ಗಳು : ಯುಪಿಎಲ್‌, ಒಎನ್‌ಜಿಸಿ, ಪವರ್‌ ಗ್ರಿಡ್‌, ವಿಪ್ರೊ, ಬಜಾಜ್‌ ಫಿನಾನ್ಸ್‌; ಟಾಪ್‌ ಲೂಸರ್‌ಗಳು : ಎಸ್‌ ಬ್ಯಾಂಕ್‌, ಟೈಟಾನ್‌ ಕಂಪೆನಿ, ಸಿಪ್ಲಾ, ಸನ್‌ ಫಾರ್ಮಾ. 

Advertisement

Udayavani is now on Telegram. Click here to join our channel and stay updated with the latest news.

Next