ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ಕಂಡು ಬಂದಿರುವುದಲ್ಲದೆ ಆರ್‌ಬಿಐ ನಿನ್ನೆ ಬುಧವಾರ ಕೈಗೊಂಡಿದ್ದ ಶೇ.0.25ರ ರೇಟ್ ಕಟ್ ತೀರ ನಿರೀಕ್ಷಿತವಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಹೊಸ ಹುಮ್ಮಸ್ಸು ಕಾಣದ ಮುಂಬಯಿ ಶೇರು ಪೇಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಕುಸಿತವನ್ನು ಕಂಡಿದೆ.
ಬೆಳಗ್ಗೆ 11.15ರ ಹೊತ್ತಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 128.28 ಅಂಕಗಳ ನಷ್ಟದೊಂದಿಗೆ 32,348.46 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 37.70 ಅಂಕಗಳ ನಷ್ಟದೊಂದಿಗೆ 10,043.80 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಎಚ್ ಡಿ ಎಫ್ ಸಿ, ಎಸ್ ಬ್ಯಾಂಕ್, ಲೂಪಿನ್, ರಿಲಯನ್ಸ್, ಎಸ್‌ಬಿಐ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಅರಬಿಂದೋ ಫಾರ್ಮಾ, ಲೂಪಿನ್, ಭಾರ್ತಿ ಏರ್‌ಟೆಲ್, ಬಿಪಿಸಿಎಲ್, ಪವರ್ ಗ್ರಿಡ್ ಕಾರ್ಪ್ ಶೇರುಗಳು ಟಾಪ್ ಗೇನರ್‌ಗಳಾಗಿದ್ದರೆ, ಹಿಂಡಾಲ್ಕೊ, ಎಸ್ ಬ್ಯಾಂಕ್, ಟಾಟಾ ಸ್ಟೀಲ್, ಎಸ್‌ಬಿಐ, ಅದಾನಿ ಪೋರ್ಟ್ ಶೇರುಗಳು ಟಾಪ್ ಲೂಸರ್ ಆಗಿದ್ದವು.