ಮುಂಬಯಿ : ಮುಂಬಯಿ ಶೇರು ಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ ನೂರಕ್ಕೂ ಅಧಿಕ ಅಂಕಗಳ ಏರಿಕೆಯನ್ನು ದಾಖಲಿಸಿತಾದರೂ ಅನಂತರ ಕುಸಿತಕ್ಕೆ ಗುರಿಯಾಗಿ ನಿರಾಶೆ ಉಂಟುಮಾಡಿತು.
ನಿನ್ನೆ ಬುಧವಾರ ಸೆನ್ಸೆಕ್ಸ್ 550.92 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿತ್ತು. ಇಂದು ಗುರುವಾರ ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 7.92 ಅಂಕಗಳ ನಷ್ಟದೊಂದಿಗೆ 4,434.13 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 8.50 ಅಂಕಗಳ ನಷ್ಟದೊಂದಿಗೆ 10,378.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 11 ಪೈಸೆಯ ಕುಸಿತಕ್ಕೆ ಗುರಿಯಾಗಿ 73.84 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ ಲಾರ್ಸನ್, ಎಸ್ ಬ್ಯಾಂಕ್, ಎಸ್‌ಬಿಐ, ಎಚ್ ಡಿ ಎಫ್ ಸಿ ಬ್ಯಾಂಕ್, ರಿಲಯನ್ಸ್ ಶೇರು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಲಾರ್ಸನ್, ಎಸ್ ಬ್ಯಾಂಕ್, ಎಚ್ ಪಿ ಸಿ ಎಲ, ಇಂಡಿಯಾಬುಲ್ಸ ಹೌಸಿಂಗ್, ಐಓಸಿ.