Advertisement

ಠುಸ್ಸಾದ ಕರ್ನಾಟಕ ನಿರೀಕ್ಷೆ : ಗಗನಕ್ಕೇರಿ ಕುಸಿದ ಮುಂಬಯಿ ಶೇರು

04:44 PM May 15, 2018 | |

ಮುಂಬಯಿ : ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದೆಂಬ ವಿಶ್ವಾಸದಲ್ಲಿ ಇಂದು ಮಂಗಳವಾರದ ಬೆಳಗ್ಗಿನ ವಹಿವಾಟಿನಲ್ಲಿ  436 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿದ್ದ ಮುಂಬಯಿ ಶೇರು ಪೇಟೆ, ಮಧ್ಯಾಹ್ನದ ವೇಳೆಗೆ ತನ್ನ ನಂಬಿಕೆ ಠುಸ್ಸಾಗುತ್ತಿರುವುದನ್ನು ಕಾಣುತ್ತಲೇ ಕುಸಿದು ಬಿದ್ದು 13 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 35,543.94 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು. 

Advertisement

ಜಾಗತಿಕ ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿ ಬಂದಿರುವುದು, ಡಾಲರ್‌ ಎದುರು ರೂಪಾಯಿ 28 ಪೈಸೆಯಷ್ಟು ಕುಸಿದಿರುವುದು ಮುಂತಾದ ಕಾರಣಗಳಿಂದಾಗಿಯೂ ಇಂದಿನ ವಹಿವಾಟನ್ನು ಸೆನ್ಸೆಕ್ಸ್‌ ನಿರಾಶಾದಾಯಕವಾಗಿ ಕೊನೆಗೊಳಿಸಿತು. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 310.44 ಅಂಕಗಳನ್ನು ಸಂಪಾದಿಸಿತ್ತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 4.70 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,929.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,779 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,028 ಶೇರುಗಳು ಮುನ್ನಡೆಗೆ ಗುರಿಯಾದವು; 1,611 ಶೇರುಗಳು ಹಿನ್ನಡೆ ಕಂಡವು; 140 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next