ಮುಂಬಯಿ : ಕಂಪೆನಿಗಳ ತ್ತೈಮಾಸಿಕ ಫಲಿತಾಂಶ, ಕೇಂದ್ರ ಬಜೆಟ್ ಮತ್ತು ದೇಶದ ಸುಧಾರಿತ ಆರ್ಥಿಕತೆ ಬಗ್ಗೆ ತಳೆಯಲಾಗಿರುವ ಭರವಸೆಯ ಬಲದಲ್ಲಿ ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 199 ಅಂಕಗಳ ಜಿಗಿತವನ್ನು ಸಾಧಿಸಿ ಸಾರ್ವಕಾಲಿಕ ಎತ್ತರದ 34,352.79 ಅಂಕಗಳ ಮಟ್ಟವನ್ನು ತಲುಪುವ ಸಾಧನೆಯನ್ನು ದಾಖಲಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 64.75 ಅಂಕಗಳ ಜಿಗಿತವನ್ನು ಪಡೆದುಕೊಂಡು ದಿನಾಂತ್ಯಕ್ಕೆ 10,623.60 ಅಂಕಗಳ ಹೊಸ ಸಾರ್ವಕಾಲಿಕ ಎತ್ತರವನ್ನು ತಲುಪುವ ಸಾಧನೆಯನ್ನು ಮಾಡಿತು. ಜನವರಿ 5ರಂದು ನಿಫ್ಟಿ 10,566.10 ಅಂಕಗಳ ಸಾರ್ವಕಾಲಿಕ ಎತ್ತರದ ಮಟ್ಟವನ್ನು ತಲುಪಿತ್ತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು 3,120 ಶೇರುಗಳ ವಹಿವಾಟಿಗೆ ಒಳಪಟ್ಟವು; 1,774 ಶೇರುಗಳು ಮುನ್ನಡೆ ಸಾಧಿಸಿದವು; 1,167 ಶೇರುಗಳು ಹಿನ್ನೆಡೆಗೆ ಗುರಿಯಾದವು; 179 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ಕೋಲ್ ಇಂಡಿಯಾ, ಲೂಪಿನ್, ಇನ್‌ಫೋಸಿಸ್, ಸನ್ ಫಾರ್ಮಾ, ಟೆಕ್ ಮಹೀಂದ್ರ.
ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಭಾರ್ತಿ ಏರ್‌ಟೆಲ್, ಒಎನ್‌ಜಿಸಿ, ಪವರ್‌ಗ್ರಿಡ್, ಏಶ್ಯನ್ ಪೇಂಟ್ಸ್.