ಮುಂಬಯಿ : ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಮಾರಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 133.86 ಅಂಕಗಳ ಮುನ್ನಡೆಯನ್ನು ಸಾಧಿಸುವ ಮೂಲಕ ಹೊಸ ಸಾರ್ವಕಾಲಿಕ ಎತ್ತರದ ಮಟ್ಟವಾಗಿ 30,883.89 ಅಂಕಗಳನ್ನು ತಲುಪಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಟ್ಟೆಯ ನಿಫ್ಟಿ ಸೂಚ್ಯಂಕ 9,542.85 ಅಂಕಗಳ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿದೆ.
ಹಿಂದಿನ ವಹಿವಾಟು ಅವಧಿಯಲ್ಲಿ ಸೆನ್ಸೆಕ್ಸ್ 448.39 ಅಂಕಗಳ ಭರ್ಜರಿ ಏರಿಕೆಯನ್ನು ಸಾಧಿಸಿತ್ತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸನ್ಸೆಕ್ಸ್ 137.27 ಅಂಕಗಳ ಏರಿಕೆಯೊಂದಿಗೆ 30,887.30 ಅಂಕಗಳ ಮಟ್ಟದಲ್ಲೂ, ನಿಫ್ಟಿ 37.50 ಅಂಕಗಳ ಏರಿಕೆಯೊಂದಿಗೆ 9.547.25 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಇಂದಿನ ಆರಂಭಿಕ ವಹವಾಟಿನಲ್ಲಿ ಟಾಟಾ ಸ್ಟೀಲ್, ರಿಲಯನ್ಸ, ಐಸಿಐಸಿಐ ಬ್ಯಾಂಕ್, ಸಿಪ್ಲಾ, ವೇದಾಂತ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು: ಹಿಂಡಾಲ್ಕೊ, ಟಾಟಾ ಸ್ಟೀಲ್, ವೇದಾಂತ, ಭಾರ್ತಿ ಏರ್‌ಟೆಲ್, ಏಶ್ಯನ್ ಪೇಂಟ್.
ಟಾಪ್ ಲೂಸರ್‌ಗಳು : ಸಿಪ್ಲಾ, ಬಿಪಿಸಿಎಲ್, ಎಸ್‌ಬಿಐ, ಸನ್ ಫಾರ್ಮಾ, ಬಾಶ್.