Advertisement

Gold; 10 ಗ್ರಾಂ ಬಂಗಾರಕ್ಕೆ 71,700 ರೂ.: ಸಾರ್ವಕಾಲಿಕ ದಾಖಲೆ

01:08 AM Apr 09, 2024 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಸೋಮವಾರ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 350 ರೂ. ಏರಿಕೆ ಕಾಣುವುದರೊಂದಿಗೆ 71,700 ರೂ.ಗೆ ತಲುಪಿದೆ. ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿರುವ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆ ಕೂಡ ಏರಿಕೆಯಾಗಿದೆ.

Advertisement

ಈ ವರ್ಷ ನಿರಂತರವಾಗಿ ಚಿನ್ನ ಏರಿಕೆ ದಾಖಲಿಸುತ್ತಿದೆ. ಬೆಳ್ಳಿ ಬೆಲೆ 800ರೂ. ಏರಿಕೆಯೊಂದಿಗೆ ಕೆ.ಜಿ.ಗೆ 84,000 ರೂ. ಆಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ ಬೆಲೆ ಸೋಮವಾರ 330 ರೂ. ಏರಿಕೆಯಾಗಿ, 10 ಗ್ರಾಂಗೆ 71,620ರೂ. ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆಯಾಗಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ 24 ಕಾರಟ್‌ 10 ಗ್ರಾಂ ಚಿನ್ನದ ಬೆಲೆ 73565 ರೂ. ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next