Advertisement

F&O ಶಾರ್ಟ್‌ ಕವರಿಂಗ್‌ : ಮುಂಬಯಿ ಶೇರು 81 ಅಂಕ ಏರಿಕೆ

05:48 AM Feb 28, 2019 | udayavani editorial |

ಮುಂಬಯಿ : ಫೆಬ್ರವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ (F&O) ನಡೆಯುವ ತಿಂಗಳ ಕೊನೆಯ ಗುರುವಾರವಾದ ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, ಶಾರ್ಟ್‌ ಕವರಿಂಗ್‌ ಕಾರಣ, ಇಂದಿನ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 81 ಅಂಕಗಳ ಏರಿಕೆಯನ್ನು ದಾಖಲಿಸಿದೆ.  ನಿನ್ನೆ ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 308 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.

Advertisement

ಇಂದು ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್‌ 98.78 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,004.21 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 20.70 ಅಂಕಗಳ ಮುನ್ನಡೆಯೊಂದಿಗೆ 10,827.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಟಿಸಿಎಸ್‌, ರಿಲಯನ್ಸ್‌, ಎಸ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಎಚ್‌ ಡಿ ಎಫ್ ಸಿ ಶೇರುಗಳು ಅತ್ಯಂತ ಸಕ್ರಿಯವಾಗಿದ್ದವು; ಟಾಪ್‌ ಗೇನರ್‌ಗಳು : ವೇದಾಂತ, ಟಾಟಾ ಮೋಟರ್‌, ಸನ್‌ ಫಾರ್ಮಾ, ಜೆಎಸ್‌ಡಬ್ಲ್ಯು ಸ್ಟೀಲ್‌, ಐಓಸಿ; ಟಾಪ್‌ ಲೂಸರ್‌ಗಳು : ಹೀರೋ ಮೋಟೋ ಕಾರ್ಪ್‌, ಒಎನ್‌ಜಿಸಿ, ಎಕ್ಸಿಸ್‌ ಬ್ಯಾಂಕ್‌, ಬಜಾಜ್‌ ಆಟೋ, ಇಂಡಿಯಾ ಬುಲ್ಸ್‌ ಹೌಸಿಂಗ್‌. 

ಡಾಲರ್‌ ಎದರು ರೂಪಾಯಿ ಇಂದು 10 ಪೈಸೆಗಳ ಏರಿಕೆಯನ್ನು ಕಂಡು 71.14 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next