Advertisement

ಅಮೆರಿಕ ಫೆಡ್‌ ರೇಟ್‌ ನಿರೀಕ್ಷೆ: ಮುಂಬಯಿ ಶೇರು 52 ಅಂಕ ಏರಿಕೆ

05:32 PM Jun 14, 2017 | |

ಮುಂಬಯಿ : ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಪರಾಮರ್ಶೆ ಸಭೆಯ ಫ‌ಲಿತಾಂಶವನ್ನು ಕುತೂಹಲದಿಂದ ಎದುರು ನೋಡುತ್ತಿರುವ ಮುಂಬಯಿ ಶೇರು ಪೇಟೆ ಇಂದು ಬುಧವಾರದ ತನ್ನ ವಹಿವಾಟನ್ನು 52.42 ಅಂಕಗಳ ಮುನ್ನಡೆಯೊಂದಿಗೆ 31,155.91 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11.25 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,618.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. 

ಇಂದಿನ ವಹಿವಾಟಿನಲ್ಲಿ ರಿಲಯನ್ಸ್‌, ಡಾ. ರೆಡ್ಡಿ, ಲಾರ್ಸನ್‌, ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಯುಎಲ್‌ ಶೇರುಗಳು ಟಾಪ್‌ ಗೇನರ್‌ ಎನಿಸಿದವು; ಆದರೆ ಸಿಪ್ಲಾ, ಐಟಿಸಿ, ಎಚ್‌ ಡಿ ಎಫ್ ಸಿ, ವಿಪ್ರೋ, ಟಾಟಾ ಸ್ಟೀಲ್‌ ಟಾಪ್‌ ಲೂಸರ್‌ ಎನಿಸಿಕೊಂಡವು. 

ಇಂದು ಒಟ್ಟು 3,005 ಶೇರುಗಳು ವ್ಯವಹಾರಕ್ಕೆ ಒಳಪಟ್ಟವು; 1,328 ಶೇರುಗಳು ಮುನ್ನಡೆ ಸಾಧಿಸಿದವು; 1,486 ಶೇರುಗಳು ಹಿನ್ನಡೆಗೆ ಗುರಿಯಾದವು; 191 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next