ಮುಂಬಯಿ : ಡಿಸೆಂಬರ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ನಡುವೆಯೇ ಕಂಡು ಬಂದ ಕೇಂದ್ರ ಸರಕಾರದ ವಿತ್ತೀಯ ಕೊರತೆ ಹೆಚ್ಚುವ ಭೀತಿಯಲ್ಲಿ ಮುಂಬಯಿ ಶೇರು ಇಂದು ಗುರುವಾರದ ವಹಿವಾಟನ್ನು 63.78 ಅಂಕಗಳ ನಷ್ಟದೊಂದಿಗೆ 33,848.03 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 12.85 ಅಂಕಗಳ ನಷ್ಟದೊಂದಿಗೆ 10,477.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ವಹಿವಾಟುದಾರರು ಮತ್ತು ಹೂಡಿಕೆದಾರರು ಲಾಭ ನಗದೀಕರಣಕ್ಕೆ ಇಳಿದ ಕಾರಣ ಮುಂಬಯಿ ಶೇರು ಇಂದು ನಷ್ಟಕ್ಕೆ ಗುರಿಯಾಯಿತು.
ಇಂದಿನ ಟಾಪ್ ಗೇನರ್‌ಗಳು : ಹಿಂಡಾಲ್ಕೊ, ಯುಪಿಎಲ್, ವೇದಾಂತ, ಟಾಟಾ ಸ್ಟೀಲ್, ಡಾ. ರೆಡ್ಡೀಸ್ ಲ್ಯಾಬ್; ಟಾಪ್ ಲೂಸರ್‌ಗಳು : ಎಸ್‌ಬಿಐ, ಹೀರೋ ಮೋಟೋ ಕಾರ್ಪ್, ಎಕ್ಸಿಸ್ ಬ್ಯಾಂಕ್,ಸನ್ ಫಾರ್ಮಾ, ಅದಾನಿ ಪೋರ್ಟ್.
ಇಂದು ಒಟ್ಟು 2,956 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,451ಶೇರುಗಳು ಮುನ್ನಡೆ ಸಾಧಿಸಿದವು; 1,309 ಶೇರುಗಳು ಹಿನ್ನಡೆಗೆ ಗುರಿಯಾದವು; 196 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.