ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಹೊಸ ಎತ್ತರವನ್ನು ತಲುಪಿದ ಸಾಧನೆಯೊಂದಿಗೆ ಇಂದು ಮಂಗಳವಾರದ ವಹಿವಾಟನ್ನು ಹೊಸ ಭರವಸೆಯೊಂದಿಗೆ ಕೊನೆಗೊಳಿಸಿದವು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ದಿನದ ವಹಿವಾಟನ್ನು 90.40 ಅಂಕಗಳ ಏರಿಕೆಯೊಂದಿಗೆ ದಾಖಲೆಯ 34,443.19 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ನಿಫ್ಟಿ ಸೂಚ್ಯಂಕ ದಿನದ ವಹಿವಾಟನ್ನು 13.40 ಅಂಕಗಳ ಮುನ್ನಡೆಯೊಂದಿಗೆ 10,6347.00 ಅಂಕಗಳ ಹೊಸ ಮಟ್ಟದ ಎತ್ತರದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 3,094 ಶೇರುಗಳು ವಹಿವಾಟಿಗೆ ಒಳಪಟ್ಟವು; 1,369 ಶೇರುಗಳು ಮುನ್ನಡೆ ಸಾಧಿಸಿದವು; 1,623 ಶೇರುಗಳು ಹಿನ್ನಡೆಗೆ ಗುರಿಯಾದವು; 102 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ಕೋಲ್ ಇಂಡಿಯಾ, ಎಸ್ ಬ್ಯಾಂಕ್, ವಿಪ್ರೋ, ಐಟಿಸಿ, ರಿಲಯನ್ಸ್.
ಟಾಪ್ ಗೇನರ್‌ಗಳು : ಝೀ ಎಂಟರ್‌ಟೇನ್‌ಮೆಂಟ್, ಈಶರ್ ಮೋಟರ್, ಹಿಂಡಾಲ್ಕೊ, ಭಾರ್ತಿ ಇನ್‌ಫ್ರಾಟೆಲ್, ಭಾರ್ತಿ ಏರ್‌ಟೆಲ್.