ಮುಂಬಯಿ : ಕಳೆದ ನಾಲ್ಕು ವಾರಗಳಲ್ಲಿ ಇದೇ ಮೊದಲ ಬಾರಿಗೆ ಮೊದಲ ಸಾಪ್ತಾಹಿಕ ನಷ್ಟವನ್ನು ದಾಖಲಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ, ಇಂದು ಶುಕ್ರವಾರದ ವಹಿವಾಟನ್ನು ಕೇವಲ 24 ಅಂಕಗಳ ಮುನ್ನಡೆಯೊಂದಿಗೆ 31,687.52 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಬೆಳಗ್ಗಿನ ತನ್ನ ಮುನ್ನಡೆಯ ಬಹುಭಾಗವನ್ನು ಬಿಟ್ಟುಕೊಟ್ಟು ದಿನಾಂತ್ಯಕ್ಕೆ ಕೇವಲ 4.90 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡು ದಿನದ ವಹಿವಾಟನ್ನು 9,934.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಪ್ರತೀ ಮೂರು ಶೇರುಗಳು ಹಿನ್ನಡೆಗೆ ಗುರಿಯಾದರೆ ಕೇವಲ ಒಂದು ಶೇರು ಮಾತ್ರವೇ ಮುನ್ನಡೆಯ ಭಾಗ್ಯವನ್ನು ಕಂಡಿತು.
ಲಾರ್ಸನ್, ವೇದಾಂತ, ರಿಲಯನ್ಸ್, ಇನ್‌ಫೋಸಿಸ್, ಡಾ. ರೆಡ್ಡಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಲಾರ್ಸನ್, ಭಾರ್ತಿ ಏರ್‌ಟೆಲ್, ಕೋಟಕ್ ಮಹೀಂದ್ರ, ಎಚ್ ಡಿ ಎಫ್ ಸಿ ಮತ್ತು ವೇದಾಂತ ಶೇರುಗಳು ಮಿಂಚಿದವು. ಟಾಪ್ ಲೂಸರ್‌ಗಳಾಗಿ ಮಹಿಂದ್ರ, ಡಾ. ರೆಡ್ಡಿ, ಬಿಪಿಸಿಎಲ್, ಬ್ಯಾಂಕ್ ಆಫ್ ಬರೋಡ ಶೇರುಗಳು ಹಿನ್ನಡೆಗೆ ಗುರಿಯಾದವು.