ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ಧನಾತ್ಮಕ ಸ್ಥಿತಿ ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 77.49 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 33,833.77 ಅಂಕಗಳ ಮಟ್ಟವನ್ನು ತಲುಪಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 23.40 ಅಂಕಗಳ ಏರಿಕೆಎಯನ್ನು ದಾಖಲಿಸಿ 10,463.70 ಅಂಕಗಳ ಎತ್ತರವನ್ನು ತಲುಪಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 80 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 181.20 ಅಂಕಗಳ ಏರಿಕೆಯೊಂದಿಗೆ 33,937.48 ಅಂಕಗಳ ಮಟ್ಟದಲ್ಲೂ , ನಿಫ್ಟಿ 45.50 ಅಂಕಗಳ ಏರಿಕೆಯೊಂದಿಗೆ 10,485.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಮಾರುತಿ ಸುಜುಕಿ, ಭಾರ್ತಿ ಏರ್ ಟೆಲ್, ಎಸ್‌ಬಿಐ, ರಿಲಯನ್, ಇನ್‌ಫೋಸಿಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಟಾಟಾ ಪವರ್, ಭಾರ್ತಿ ಏರ್‌ಟೆಲ್, ಒಎನ್‌ಜಿಸಿ, ಎಸ್‌ಬಿಐ, ಮಾರುತಿ ಸುಜಕಿ ವಿಜೃಂಭಿಸಿದವು; ಟಾಪ್ ಲೂಸರ್‌ಗಳಾಗಿ ಲೂಪಿನ್, ಬಜಾಜ್ ಆಟೋ, ಎಚ್‌ಸಿಎಲ್ ಟೆಕ್, ಐಡಿಯಾ ಸೆಲ್ಯುಲರ್, ಕೋಲ್ ಇಂಡಿಯಾ ಹಿನ್ನಡೆಗೆ ಗುರಿಯಾದವು.