ಮುಂಬಯಿ : ಏಕ ದೇಶ ಏಕ ತೆರಿಗೆ ಧ್ಯೇಯ ಹೊಂದಿರುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬಂದ ಬಳಿಕದ ಮೊದಲ ದಿನದ ವಹಿವಾಟಿನಲ್ಲಿ ಜಿಎಸ್‌ಟಿ ಭಯ-ಆತಂಕವನ್ನು ಸಂಪೂರ್ಣವಾಗಿ ಕೊಡವಿಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರದ ವಹಿವಾಟನ್ನು 300.01 ಅಂಕಗಳ ಭರ್ಜರಿ ಏರಿಕೆಯೊಂದಿಗೆ 31,221.62 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 94.10 ಅಂಕಗಳ ಗಳಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,615 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇಂದು ಲಾರ್ಜ್ ಕ್ಯಾಪ್ ಶೇರುಗಳಲ್ಲಿ ಶಾರ್ಟ್ ಕವರಿಂಗ್ ಕಂಡು ಬಂದು ಸೆನ್ಸೆಕ್ಸ್‌ನ ಭರ್ಜರಿ ಗಳಿಕೆಗೆ ಕಾರಣವಾಯಿತು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಶೇರುಗಳು ಕೂಡ ಶೇ.1ರ ಜಿಗಿತವನ್ನು ಕಂಡವು.
ಇಂದು ಹಿನ್ನಡೆಗೆ ಗುರಿಯಾದ ಪ್ರತೀ ಒಂದು ಶೇರಿಗೆ ಸಂವಾದಿಯಾಗಿ ಎರಡು ಶೇರುಗಳು ಮುನ್ನಡೆಯನ್ನು ದಾಖಲಿಸಿದವು.
ಇಂದು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಐಟಿಸಿ, ಮಾರುತಿ ಸುಜುಕಿ, ಟಾಟಾ ಸ್ಟೀಲ್, ಎಸ್ ಬ್ಯಾಂಕ್, ವೇದಾಂತ.
ಟಾಪ್ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಐಟಿಸಿ, ಹಿಂಡಾಲ್ಕೊ, ಈಶರ್ ಮೋಟರ್, ವೇದಾಂತ; ಟಾಪ್ ಲೂಸರ್‌ಗಳು : ಎಚ್‌ಸಿಎಲ್ ಟೆಕ್, ಎನ್‌ಟಿಪಿಸಿ, ಕೋಟಕ್ ಮಹೀಂದ್ರ, ಸನ್ ಫಾರ್ಮಾ, ಸಿಪ್ಲಾ.