Advertisement

76,000 ಅಂಕ ತಲುಪಿದ್ದ ಬಿಎಸ್‌ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ

12:47 AM May 28, 2024 | |

ಮುಂಬಯಿ: ಬಾಂಬೆ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ ದಿನದ ಆರಂಭದಲ್ಲಿ 76,000 ಅಂಕಗಳಿಗೆ ಏರಿಕೆಯಾಗಿತ್ತು. ಇದು ಸೆನ್ಸೆಕ್ಸ್‌ನ ಗರಿಷ್ಠ ಏರಿಕೆ ಎನಿಸಿಕೊಂಡಿತು. ಮಧ್ಯಾಂತರದಲ್ಲಿ ಸೆನ್ಸೆಕ್ಸ್‌ 599.29 ಅಂಕಗಳಷ್ಟು ಅಥವಾ ಶೇ.0.79 ಏರಿಕೆಗೊಂಡು 76,009.68ಕ್ಕೆ ತಲುಪಿತ್ತು.

Advertisement

ದಿನದಾಂತ್ಯಕ್ಕೆ 19.89 ಅಂಕಗಳು ಇಳಿಕೆ ಕಂಡಿದ್ದು, 75,390.50 ಅಂಕಗಳಲ್ಲಿ ವಹಿವಾಟು ಅಂತ್ಯ ಗೊಳಿಸಿದೆ. ಇನ್ನು ನಿಫ್ಟಿ ಮಧ್ಯಾಂತರದಲ್ಲಿ 153.7 ಅಂಕಗಳೊಂದಿಗೆ 23,110.80ರಷ್ಟು ಏರಿಕೆಯಾಗಿ ಸಾರ್ವಕಾಲಿಕ ಏರಿಕೆ ಕಂಡಿತ್ತು. ದಿನದಾಂತ್ಯಕ್ಕೆ 24.65 ಅಂಕಗಳಷ್ಟು ಇಳಿಕೆ ಕಂಡು 22,932.45ಕ್ಕೆ ಅಂತ್ಯ ಗೊಂಡಿದೆ. ಜೂ.1ಕ್ಕೆ ಕೊನೆಯ ಹಂತದ ಲೋಕಸಭೆ ಚುನಾವಣೆ ಇರುವುದರಿಂದ ಷೇರುಪೇಟೆ ಚಂಚಲ ವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next