ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ವಿವಿಧ ರಂಗಗಳ ಶೇರುಗಳ ಭರಾಟೆ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟಿನಲ್ಲಿ 254 ಅಂಕಗಳ ಜಿಗಿತವನ್ನು ಸಾಧಿಸಿ ಹೊಸ ದಾಖಲೆಯ ಎತ್ತರವಾಗಿ 32,687.32 ಅಂಕಗಳ ಮಟ್ಟವನ್ನು ತಲುಪಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,242.45 ಅಂಕಗಳಿಗೆ ಏರುವ ಮೂಲಕ ಸಾರ್ವಕಾಲಿಕ ಎತ್ತರವನ್ನು ಏರಿದ ಸಾಧನೆಯನ್ನು ದಾಖಲಿಸಿತು.
ದೇಶೀಯ ಸಾಂಸ್ಥಿಕ ಹೂಡಿಕೆದಾರರು ಎಗ್ಗಿಲ್ಲದ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಇಂದು ಮೆಟಲ್, ಆಟೋ, ಎಫ್ ಎಂ ಸಿ ಜಿ, ಬ್ಯಾಂಕಿ,ಗ್ ಮತ್ತು ತೈಲ ಹಾಗೂ ಅನಿಲ ರಂಗದ ಶೇರುಗಳು ಉತ್ತಮ ಏರಿಕೆಯನ್ನು ಕಂಡವು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 185.59 ಅಂಕಗಳ ಏರಿಕೆಯೊಂದಿಗೆ 32,618.28 ಅಂಕಗಳ ಮಟ್ಟದಲ್ಲೂ , ನಿಫ್ಟಿ 63.90 ಅಂಕಗಳ ಜಿಗಿತದೊಂದಿಗೆ 10,231.40 ಅಂಕಗಳ ಮಟ್ಟದಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಇಂಡಸ್ ಇಂಡ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಹಿಂಡಾಲ್ಕೊ ಶೇರುಗಳು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದವು.
ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳು : ಐಡಿಯಾ ಸೆಲ್ಯುಲರ್, ವೇದಾಂತ, ಭಾರ್ತಿ ಇನ್‌ಫ್ರಾಟೆಲ್, ಅರಬಿಂದೋ ಫಾಮಾ, ಹಿಂಡಾಲ್ಕೋ.
ಟಾಪ್ ಲೂಸರ್‌ಗಳು : ಇಂಡಸ್ ಇಂಡ್ ಬ್ಯಾಂಕ್, ಎಕ್ಸಿಸ್ ಬಾಯಂಕ್, ಟೆಕ್ ಮಹೀಂದ್ರ, ವಿಪ್ರೋ, ಬಜಾಜ್ ಫೈನಾನ್ಸ್.