ಮುಂಬಯಿ : ಸರಕಾರ ನಿನ್ನೆ ಬಿಡುಗಡೆಗೊಳಿಸಿದ್ದ ದೇಶದ ಸ್ಥೂಲ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳು ದುರ್ಬಲವಿದ್ದ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 191 ಅಂಕಗಳ ಜಿಗಿತವನ್ನು ಸಾಧಿಸುವ ಮೂಲಕ ಹೊಸ ದಾಖಲೆಯ ಎತ್ತರವನ್ನು ಕಂಡಿತು.
ಇನ್‌ಫೋಸಿಸ್, ಕೋಲ್ ಇಂಡಿಯಾ, ವಿಪ್ರೋ ಮುಂತಾದ ಮುಂಚೂಣಿ ಶೇರುಗಳಲ್ಲಿ ತೋರಿ ಬಂದ ಗಮನಾರ್ಹ ಏರಿಕೆಯ ಫಲವಾಗಿ ಸೆನ್ಸೆಕ್ಸ್ ಇಂದು ಹೊಸ ದಾಖಲೆಯ ಎತ್ತರವನ್ನು ಕಾಣಲು ಸಾಧ್ಯವಾಯಿತು.
ನಿರಂತರ ಆರನೇ ದಿನವಾಗಿ ಇಂದು ಏರಿಕೆಯನ್ನು ಕಂಡಿರುವ ಮುಂಬಯಿ ಶೇರು ಕಳೆದ ಐದು ದಿನಗಳ ವಹಿವಾಟಿನಲ್ಲಿ 973.86 ಅಂಕಗಳನ್ನು ಸಂಪಾದಿಸಿತ್ತು.
ಹಾಗಿದ್ದರೂ ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ಗಳಿಕೆಯ ಬಹುಪಾಲನ್ನು ಬಿಟ್ಟುಕೊಟ್ಟು 40.31 ಅಂಕಗಳ ಮುನ್ನಡೆಯೊಂದಿಗೆ 36,588.72 ಅಂಕಗಳ ಮಟ್ಟದಲ್ಲೂ ರಾಷ್ಟೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.10 ಅಂಕಗಳ ನಷ್ಟದೊಂದಿಗೆ 11,020.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ನಿಫ್ಟಿ ಟಾಪ್ ಗೇನರ್‌ಗಳು : ವಿಪ್ರೋ, ಇನ್‌ಫೋಸಿಸ್, ರಿಲಯನ್ಸ್, ಕೋಟಕ್ ಮಹೀಂದ್ರ, ಕೋಲ್ ಇಂಡಿಯಾ; ನಿಫ್ಟಿ ಟಾಪ್ ಲೂಸರ್‌ಗಳು : ಯುಪಿಎಲ್, ಭಾರ್ತಿ ಇನ್ ಫ್ರಾಟೆಲ್, ಎಚ್‌ಸಿಎಲ್ ಟೆಕ್, ಐಡಿಯಾ ಸೆಲ್ಯುಲರ್, ಎಸ್ ಬ್ಯಾಂಕ್.