ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿನ ಧನಾತ್ಮಕತೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 93.09 ಅಂಕಗಳ ಏರಿಕೆಯನ್ನು ಪಡೆದುಕೊಂಡು 35,7606.80 ಅಂಕಗಳ ಮಟ್ಟಕ್ಕೆ ಏರಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 27.50 ಅಂಕಗಳ ಏರಿಕೆಯನ್ನು ದಾಖಲಿಸಿ 10,699.80 ಅಂಕಗಳ ಮಟ್ಟಕ್ಕೇರಿತು.
ಆಟೋಮೊಬೈಲ್, ಬ್ಯಾಂಕ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ರಂಗದ ಶೇರುಗಳು ಉತ್ತಮ ಬೇಡಿಕೆ ಪಡೆದುಕೊಂಡವು. ಆರಂಭಿಕ ವಹಿವಾಟಿನಲ್ಲಿಂದು 285 ಶೇರುಗಳು ಮುನ್ನಡೆ ಕಂಡರೆ 116 ಶೇರುಗಳು ಹಿನ್ನಡೆಗೆ ಗುರಿಯಾದವು; 25 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಹಾಗಿದ್ದರೂ ಬೆಳಗ್ಗೆ 10.15ರ ಹೊತ್ತಿಗೆ ಸೆನ್ಸೆಕ್ಸ್ 43.28 ಅಂಕಗಳ ನಷ್ಟಕ್ಕೆ ಗುರಿಯಾಗಿ 35,470.43 ಅಂಕಗಳ ಮಟ್ಟಕ್ಕೆ ಜಾರಿತು. ಹಾಗೆಯೇ ನಿಫ್ಟಿ 17.60 ಅಂಕಗಳ ನಷ್ಟಕ್ಕೆ ಗುರಿಯಾಗಿ 10,654.70 ಅಂಕಗಳ ಮಟ್ಟಕ್ಕೆ ಜಾರಿತು.
ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್, ಈಶರ್ ಮೋಟರ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್, ಇನ್‌ಫೋಸಿಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಟಾಟಾ ಮೋಟರ್, ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ, ಒಎನ್‌ಜಿಸಿ; ಟಾಪ್ ಲೂಸರ್‌ಗಳು : ಟಿಸಿಎಸ್, ಟೆಕ್ ಮಹೀಂದ್ರ, ಇನ್‌ಫೋಸಿಸ್, ಎಚ್‌ಸಿಎಲ್ ಟೆಕ್, ಎಸ್ ಬ್ಯಾಂಕ್.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 69.91 ರೂ.ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.