Advertisement

ಏಶ್ಯನ್‌ ಪೇಟೆಯಲ್ಲಿ ತೇಜಿ: ಮುಂಬಯಿ ಶೇರು 93 ಅಂಕ ಜಿಗಿತ

10:39 AM Sep 20, 2017 | |

ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಉತ್ತಮ ತೇಜಿ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಅಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 93 ಅಂಕಗಳ ಜಿಗಿತವನ್ನು ಸಾಧಿಸಿತು. ಪರಿಣಾಮವಾಗಿ ಆರ್‌ಐಎಲ್‌, ಎಲ್‌ ಆ್ಯಂಡ್‌  ಟಿ ಮತ್ತು ಐಟಿಸಿ ಶೇರುಗಳು ಉತ್ತಮ ಖರೀದಿಯನ್ನು ಕಂಡವು. 

Advertisement

ನಿನ್ನೆ ಮಂಗಳವಾರದ ವಹಿವಾಟನ್ನು ಸೆನ್ಸೆಕ್ಸ್‌ 21.39 ಅಂಕಗಳ ನಷ್ಟದೊಂದಿಗೆ ಕೊನೆಗೊಳಿಸಿತ್ತು.

ಇಂದು ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್‌  25 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡ 32,427.39 ಅಂಕಗಳ ಮಟ್ಟದಲ್ಲೂ  ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.20 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,147.70 ಅಂಕಗಳ ಮಟ್ಟದಲ್ಲೂ ವ್ಯವಹರಿಸುತ್ತಿದ್ದವು. 

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ರಿಲಯನ್ಸ್‌, ಡಾ. ರೆಡ್ಡಿ, ಲಾರ್ಸನ್‌, ಎಸ್‌ಬಿಐ ಮತ್ತು ಎಸ್‌ ಬ್ಯಾಂಕ್‌ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡವು.  ಇದೇ ವೇಳೆ ಐಡಿಯಾ ಸೆಲ್ಯುಲರ್‌, ಬಿಪಿಸಿಎಲ್‌, ಟಾಟಾ ಮೋಟರ್‌, ಕೋಲ್‌ ಇಂಡಿಯಾ, ಹೀರೋ ಮೋಟೋ ಕಾರ್ಪ್‌ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next