ಮುಂಬಯಿ : ದೇಶೀಯ ಹೂಡಿಕೆದಾರರಿಂದ ಬಂಡವಾಳ ಒಳಹರಿವು ಹೆಚ್ಚಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 154 ಅಂಕಗಳ ಜಿಗಿತವನ್ನು ಸಾಧಿಸಿತು.
ಮೊನ್ನೆ ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 235.44 ಅಂಕಗಳ ಏರಿಕೆಯನ್ನು ಸಾಧಿಸಿತ್ತು.
ಇಂದು ಬುಧವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 54.67 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 31,503.70 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.35 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡ 9,803.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್ ಡಿ ಎಫ್ ಸಿ, ಐಟಿಸಿ, ಎಸ್ ಬ್ಯಾಂಕ್, ರಿಲಯನ್ಸ್, ಸನ್ ಫಾರ್ಮಾ ಶೇರುಗಳು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟೆಕ್ ಮಹೀಂದ್ರ, ಟಾಟಾ ಪವರ್, ಐಟಿಸಿ, ಸನ್ ಫಾರ್ಮಾ, ಎಚ್‌ಯುಎಲ್ ಶೇರುಗಳು ಟಾಪ್ ಗೇನರ್ ಆಗಿದ್ದರೆ, ಬ್ಯಾಂಕ್ ಆಫ್ ಬರೋಡ, ಎಸ್ ಬ್ಯಾಂಕ್, ಏಶ್ಯನ್ ಪೇಂಟ್ಸ್, ಲಾರ್ಸನ್, ಅಲ್‌ಟ್ರಾ ಟೆಕ್ ಸಿಮೆಂಟ್ ಶೇರುಗಳು ಟಾಪ್ ಲೂಸರ್ ಆಗಿದ್ದವು.